ಚೆನ್ನೈನಲ್ಲಿ ಮರುಕಳಿಸಿದ ಸ್ವಾತಿ ಕೊಲೆ ಪ್ರಕರಣ

ಶುಕ್ರವಾರ, 9 ಡಿಸೆಂಬರ್ 2016 (11:49 IST)
ಸಂಪೂರ್ಣ ದೇಶವನ್ನು ಆಘಾತಕ್ಕೆ ದೂಡಿದ್ದ ಟೆಕ್ಕಿ ಸ್ವಾತಿ ಭೀಕರ ಕೊಲೆ ಪ್ರಕರಣವನ್ನೇ ಹೋಲುವ ಘಟನೆ ಮತ್ತೆ ಚೆನ್ನೈನಲ್ಲಿ ಗುರುವಾರ ಸಂಜೆ ನಡೆದಿದೆ. 
ಭಗ್ನಪ್ರೇಮಿಯೊಬ್ಬ ಸಾರ್ವಜನಿಕರ ಸಮ್ಮುಖದಲ್ಲೇ ತನ್ನ ಗೆಳತಿಯ ಕತ್ತ ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
 
ಮೃತಳನ್ನು 23 ವರ್ಷದ ಸೋನಿಯಾ ಎಂದು ಗುರುತಿಸಲಾಗಿದ್ದು ಪೆರುಂಗಲಥೂರ್ ಬಸ್ ನಿಲ್ದಾಣದಲ್ಲಿ ಬಸ್‌ ಇಳಿದು ಹೋಗುತ್ತಿದ್ದ ಆಕೆಯ ಬಳಿ ಬಂದ ಪ್ರೇಮಿ ಪ್ರಶಾಂತ ಆಕೆಯೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಏನೋ ಗಲಾಟೆಯಾಗುತ್ತಿದೆ ಎಂದು ಸ್ಥಳೀಯರು ಅವರ ಹತ್ತಿರ ಬರುತ್ತಿದ್ದಂತೆ ತನ್ನ ಬ್ಯಾಗ್‌ನಿಂದ ಚಾಕು ಹೊರತೆಗೆದು ಎಲ್ಲರ ಸಮ್ಮುಖದಲ್ಲೇ ಆಕೆಯ ಕತ್ತು ಕೊಯ್ದು ಅಲ್ಲಿಂದ ಓಡಿ ಹೋಗಿದ್ದಾನೆ. 
 
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾದರೂ, ಆಕೆ ಮೃತ ಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. 
 
ಪೀರ್ ಕಂಕರಣೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. 
 
ಪ್ರಶಾಂತ ಮತ್ತು ಸೋನಿಯಾ ಪರಷ್ಪರ ಪ್ರೀತಿಸುತ್ತಿದ್ದರು. ಆದರೆ ತನ್ನ ಮನೆಯವರು ವಿರೋಧ ವ್ಯಕ್ತ ಪಡಿಸಿದ್ದರಿಂದ ಸೋನಿಯಾ ಇತ್ತೀಚಿಗೆ ಪ್ರಶಾಂತನಿಂದ ದೂರವಿರಲು ಪ್ರಯತ್ನಿಸುತ್ತಿದ್ದಳು. ಇದರಿಂದ ನೊಂದಿದ್ದ ಪ್ರಶಾಂತ ಆಕೆಯ ಒಲಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದ. ಗುರುವಾರ ಸೋನಿಯಾಳು ಬೇರೊಬ್ಬನ ಬೈಕ್ ಏರಿದ್ದನ್ನು ನೋಡಿ ಪ್ರಶಾಂತ್ ಆಕೆ ತಾಂಬರಮ್ ಬಸ್ ಏರಿದ್ದನ್ನು ಕಂಡು ಅದನ್ನು ಹಿಂಬಾಲಿಸಿದ್ದಾನೆ. ಪೆರುಂಗಲಥೂರ್ ಬಸ್ ನಿಲ್ದಾಣದಲ್ಲಿ ಇಳಿದ ಆಕೆಯ ಜತೆ ವಾಗ್ವಾದಕ್ಕಿಳಿದ್ದಾನೆ. ತಾರಕಕ್ಕೇರಿದ ಮಾತುಕತೆ ಕೊಲೆಯಲ್ಲಿ ದುರಂತ ಅಂತ್ಯ ಕಂಡಿದೆ. 
 
6 ತಿಂಗಳಲ್ಲಿ ಇದೇ ರೀತಿಯಲ್ಲಿ ಮೂರು ಘಟನೆಗಳು ನಡೆದಿವೆ. ಜೂನ್ 24ರಂದು ನುಂಗಮ್ ಬಾಕಮ್ ರೈಲು ನಿಲ್ದಾಣದಲ್ಲಿ 23 ವರ್ಷದ ಸ್ವಾತಿ ಎಂಬಾಕೆ ಭಗ್ನಪ್ರೇಮಿ ರಾಮ್ ಕುಮಾರ್ ಎಂಬಾತನಿಂದ ಕ್ರೂರವಾಗಿ ಕೊಲೆಯಾಗಿದ್ದಳು. ಇತ್ತೀಚಿಗೆ ಅಂದರೆ ಅಕ್ಟೋಬರ್ 28ರಂದು 24 ವರ್ಷದ ಶಿವರಂಜಿನಿ ಎಂಬಾಕೆಯ ಮೇಲೆ ಕೊಯಂಬೇಡ್ ಬಸ್ ನಿಲ್ದಾಣದಲ್ಲಿ ಅರವಿಂದನ್ ಎಂಬಾತ ಮಾರಣಾಂತಿಕ ದಾಳಿ ನಡೆಸಿದ್ದ. ಪ್ರೀತಿಯನ್ನು ನಿರಾಕರಿಸಿದ್ದುದೇ ಕೊಲೆಗೆ ಕಾರಣವಾಗಿತ್ತು.
 

ವೆಬ್ದುನಿಯಾವನ್ನು ಓದಿ