ಛತ್ತಿಸಘಡ್ದ ಕಬೀರಧಾಮ್ ಜಿಲ್ಲೆಯ ಗ್ರಾಮವೊಂದರಲ್ಲಿ, ಪತಿ-ಪತ್ನಿಯರ ನಡುವೆ ಕಲಹ ಉಂಟಾದ ಹಿನ್ನಲೆಯಲ್ಲಿ, ಪತಿ ಗ್ರಾಮಸ್ಥರ ಎದುರು ತನ್ನ ಪತ್ನಿಯನ್ನು ನಗ್ನವನ್ನಾಗಿಸಿ ಪೂರ್ತಿ ಗ್ರಾಮದಲ್ಲಿ ಸುತ್ತಾಡಿಸಿದ್ದಾನೆ. ಆದರೆ, ಈ ಪ್ರಕರಣದ ಕುರಿತು ಪತ್ನಿ ಪೋಲಿಸರಿಗೆ ಯಾವುದೇ ದೂರು ಸಲ್ಲಿಸಿಲ್ಲ.
ಮೂಲಗಳ ಪ್ರಕಾರ, ಕೊಯಲಾರಿ ಗ್ರಾಮದಲ್ಲಿ ಮನೀರಾಮ್ ಸಾಹು(40) ಯಾವುದೋ ಒಂದು ವಿಷಯಕ್ಕೆ ಪತ್ನಿಯ ಜೊತೆ ಜಗಳವಾಡಿದ್ದನು. ಈ ಮಹಿಳೆ ಆತನ ಎರಡನೇ ಪತ್ನಿಯಾಗಿದ್ದು, ಇವರಿಗೆ ಮೂವರು ಮಕ್ಕಳು ಕೂಡಾ ಇದ್ದಾರೆ. ಈ ಕಲಹ ಇಷ್ಟಕ್ಕೆ ನಿಲ್ಲದೆ, ಸಿಟ್ಟಿಗೆದ್ದ ಪತಿ, ಪತ್ನಿಗೆ ಹೊಡೆಯುವದಲ್ಲದೆ ಆಕೆಯನ್ನು ನಿರ್ವಸ್ತ್ರಗೊಳಿದ. ಇಷ್ಟಕ್ಕು ತೃಪ್ತಿಯಾಗದ ಪತಿ, ನಗ್ನ ಸ್ಥಿತಿಯಲ್ಲಿರುವ ಪತ್ನಿಯನ್ನು ಗ್ರಾಮದ ಗಲ್ಲಿಗಳಲ್ಲಿ ಮತ್ತು ನಾಲ್ಕು ರಸ್ತೆ ಸೇರುವಲ್ಲಿ ಕರೆದುಕೊಂಡು ಬಂದ.
ಮಾಹಿತಿ ತಿಳಿದ ತಕ್ಷಣ ಪೋಲಿಸರು ಘಟನಾ ಸ್ಥಳಕ್ಕೆ ಬಂದಾಗ, ಪತಿ ತನ್ನ ಪತ್ನಿಯನ್ನು ಮನೆಗೆ ತಲುಪಿಸಿದ್ದನು. ಫೋಲಿಸರು ಆತನ ಮನೆಗೆ ಹೋದಾಗ ಆತನ ಪತ್ನಿ ವಸ್ತ್ರಧರಿಸಿಕೊಂಡು ಮನೆ ಹೊರಗಡೆ ಚಿಕ್ಕ ಮಗಳನ್ನು ಹಿಡಿದುಕೊಂಡು ಕುಳಿತಿದ್ದಳು. ಆರೋಪಿ ಪತಿ ತನ್ನ ಮನೆಯಲ್ಲಿ ಮಲಗಿಕೊಂಡಿದ್ದನು ಎಂದು ಪೋಲಿಸ್ ಮೂಲಗಳು ತಿಳಿಸಿವೆ.