ಅಕ್ರಮ ಸಂಬಂಧ ಶಂಕೆ: ಮಗನೆದುರೇ ಪತ್ನಿಗೆ 25 ಬಾರಿ ಚುಚ್ಚಿ ಕೊಂದ ಪತಿ

ಗುರುವಾರ, 22 ಜೂನ್ 2017 (14:36 IST)
ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಮಗನ ಎದುರೇ ವ್ಯಕ್ತಿಯೊಬ್ಬ ಪತ್ನಿಗೆ 25 ಬಾರಿ ಚಾಕುವಿನಿಂದ ದೆಹಲಿಯ ದಿಲ್ ಶಾದ್ ಗಾರ್ಡನ್`ನಲ್ಲಿ ನಡೆದಿದೆ.

ಅಮ್ಮನನ್ನ ರಕ್ಷಿಸಲು ಹೋದ 15 ವರ್ಷದ ಮಗನಿಗೂ ಗಾಯಗಳಾಗಿವೆ. ಪತ್ನಿಯನ್ನ ಕೊಂದ 40 ವರ್ಷದ ವಿನೋದ್ ನಾಪತ್ತೆಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ. ಹತ್ಯೆಗೀಡಾದ ಪತ್ನಿಯನ್ನ 36 ವರ್ಷದ ರೇಖಾ ಎಂದು ಗುರ್ತಿಸಲಾಗಿದೆ. ಗಾಯಗೊಂಡಿದ್ದ ಮಗ ಅಪ್ಪನ ಹೀನ ಕೃತ್ಯದ ಬಗ್ಗೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ರೇಖಾ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಅನುಮಾನಗೊಂಡಿದ್ದ ವಿನೋದ್ ಬುಧವಾರ ಪತ್ನಿ ಜೊತೆ ವಾಗ್ವಾದ ನಡೆಸಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ವಿನೋದ್ ಅಡುಗೆ ಮನೆಯಿಂದ ತರಕಾರಿ ಕತ್ತರಿಸುವ ಚಾಕು ತಂದು 25 ಬಾರಿ ಚುಚ್ಚಿದ್ದಾನೆ. ಅಪ್ಪನ ಕೈಯಿಂದ ಚಾಕು ಕಿತ್ತುಕೊಳ್ಳಲು ಯತ್ನಿಸಿದ ಮಗನಿಗೂ ಚುಚ್ಚಿದ್ದಾನೆ. ಅದೇ ಕಾಲೋನಿಯಲ್ಲಿ ವಾಸವಿದ್ದ  ಹತ್ಯೆಗೀಡಾದ ರೇಖಾ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ