ಐಸಿಸ್ ಸೇರಿ ಉಗ್ರನಾಗಿದ್ದ ಹೈದರಾಬಾದ್ ಯುವಕನ ಸಾವು

ಮಂಗಳವಾರ, 5 ಮೇ 2015 (13:12 IST)
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯಲ್ಲಿ ಸೇರಿಕೊಂಡಿದ್ದ ಹೈದರಾಬಾದ್ ಮೂಲದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ  ಸಿರಿಯಾದಲ್ಲಿ ಸಾವನ್ನಪ್ಪಿದ್ದಾನೆ.

ಮೂಲತಃ ಹೈದರಾಬಾದ್‌ನವನಾದ ಹನೀಫ್ ವಾಸಿಂ ಎಂಬ 25ರ ಹರೆಯದ ಎಂಜಿನಿಯರಿಂಗ್ ವಿದ್ಯಾರ್ಥಿ ನವೆಂಬರ್‌ 2014ರಲ್ಲಿ  ಐಸಿಸ್‌ನ್ನು ಸೇರಿಕೊಂಡಿದ್ದ. ಆತ ಕಳೆದ ಮಾರ್ಚ್ 15 ರಂದು ಮೃತಪಟ್ಟಿದ್ದಾನೆ ಎಂದು ಮಾಹಿತಿ ಲಭಿಸಿದೆ. ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಪರ ಹೋರಾಟದಲ್ಲಿ ಪಾಲ್ಗೊಂಡಿದ್ದ ಆತ ಅಮೆರಿಕ ನೇತೃತ್ವದ ಪಡೆ ದಾಳಿ ನಡೆಸಿದ ಸಂದರ್ಭದಲ್ಲಿ ಸಾವನ್ನಪ್ಪಿರಬಹುದು ಎಂದು ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.
 
ಉನ್ನತ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ತೆರಳಿದ್ದ ವಾಸಿಂ ಐಸಿಸ್ ಉಗ್ರರ ಪ್ರಭಾವಕ್ಕೆ ಒಳಗಾಗಿ ಸಿರಿಯಾಕ್ಕೆ ಪರಾರಿಯಾಗಿದ್ದ. ಈತ ಅದಿಲಾಬಾದ್ ಜಿಲ್ಲೆಯ ಮಂಚೇರಿಯಲ್ ಮೂಲದವನಾಗಿದ್ದು ಶಾದನ್ ಕಾಲೇಜಿನಲ್ಲಿ ಎಂಜಿನಿಯರಿಂಗ ಪದವಿ ಪಡೆದಿದ್ದ. ಆತ ತನ್ನ ಜತೆ ಕರೀಂನಗರದ ಮತ್ತೋರ್ವ ಯುವಕನನ್ನು ಸಹ ಸಿರಿಯಾಕ್ಕೆ  ಕರೆದೊಯ್ದಿದ್ದಾನೆ ಎಂದು ಹೇಳಲಾಗುತ್ತಿದೆ. 
 
ಕಳೆದ ಫೆಬ್ರವರಿಯಲ್ಲಿ ವಾಸಿಂ ಸಹೋದರಿ ವಿವಾಹಕ್ಕೆ ಭಾರತಕ್ಕೆ ಬಂದಿದ್ದ. ಭಾರತದ ಅನೇಕ ಯುವಕರು ಐಸಿಸ್ ಸೇರಿಕೊಂಡಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. 

ವೆಬ್ದುನಿಯಾವನ್ನು ಓದಿ