ನಾನು ಸಂವಿಧಾನ ವಿರೋಧಿ ಪದ ಬಳಸಿಲ್ಲ: ನಾಯ್ಡು ಸಮರ್ಥನೆ

ಗುರುವಾರ, 26 ಫೆಬ್ರವರಿ 2015 (12:59 IST)
ನಗರದ ಸಂಸತ್ ಭವನದಲ್ಲಿ ಇಂದು ವಿರೋಧ ಪಕ್ಷಗಳು ವೆಂಕಯ್ಯ ನಾಯ್ಡು ಅವರು ಕ್ಷಮೆಯಾಚಿಸಬೇಕೆಂದು ಗದ್ದಲ ಎಬ್ಬಿಸಿದ ಪರಿಣಾಮ ಪ್ರತಿಕ್ರಿಯಿಸಿದ ಕೇಂದ್ರ ನಗರಾಭಿವಬದ್ಧಿ ಸಚಿವ ವೆಂಕಯ್ಯ ನಾಯ್ಡು, ತಾನು ಸದನದಲ್ಲಿ ಸಂಸತ್ ವಿರೋಧಿ ಪದಗಳನ್ನು ಬಳಸಿಲ್ಲ ಎಂದರು.
 
ವಿಷಯ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ನಾನು ವಿಪಕ್ಷಗಳನ್ನು ಗೌರವಿಸುತ್ತೇನೆ. ನಾನು ಇಲ್ಲಿ ಯಾವುದೇ ರೀತಿಯ ಸಂವಿಧಾನ ವಿರೋಧಿ ಪದಗಳನ್ನು ಬಳಸಿಲ್ಲ ಎಂದು ಹೇಳಿದ್ದಾರೆ. ಯಾರನ್ನಾದರೂ ನೋಯಿಸಬೇಕು ಎಂಬುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಆ ಹೇಳಿಕೆಯನ್ನು ನೀಡುವಾಗ ನನ್ನ ಮನಸ್ಸಲ್ಲಿ ಯಾವುದೇ ಪಕ್ಷ ಅಥವಾ ವ್ಯಕ್ತಿಯ ಮೇಲೆ ದ್ವೇಷ ಇರಲಿಲ್ಲ ಎಂದರು. 
 
ಇಂದು ಲೋಕಸಭೆಯಲ್ಲಿ ರೈಲ್ವೇ ಬಜೆಟ್ ಮಂಡನೆಗೂ ಮುನ್ನ ಮಾತನಾಡಿದ್ದ ನಾಯ್ಡು, ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತರನ್ನು ತುಳಿಯಲು ಸಾಧ್ಯವಿಲ್ಲ  ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು. ಈ ಹೇಳಿಕೆಯನ್ನು ವಿರೋಧ ಪಕ್ಷಗಳ ಸದಸ್ಯರು ತೀವ್ರವಾಗಿ ಖಂಡಿಸಿದರಲ್ಲದೆ ನಾಯ್ಡು ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದು ಸದನವನ್ನು ಬಹಿಷ್ಕರಿಸಿ ಹೊರ ನಡೆದಿದ್ದರು. ಮಾತ್ರವಲ್ಲದೆ ರೈಲ್ವೇ ಬಜೆಟ್ ಮಂಡನೆಗೆ ತಡೆಯೊಡ್ಡುವುದಾಗಿ ಬೆದರಿಕೆಯನ್ನು ವೊಡ್ಡಿದ್ದವು. ಈ ಹಿನ್ನೆಲೆಯಲ್ಲಿ ನಾಯ್ಡು ವಿಷಯವನ್ನು ಸಮರ್ಥಿಸಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ