ಈಗಲೂ ನಾನೇ ರಾಷ್ಟ್ರೀಯ ಅಧ್ಯಕ್ಷ

ಸೋಮವಾರ, 9 ಜನವರಿ 2017 (07:33 IST)
ಉತ್ತರ ಪ್ರದೇಶದ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆದರೆ ರಾಜ್ಯದ ಪ್ರಮುಖ ಪಕ್ಷ ಸಮಾಜವಾದಿಯಲ್ಲಿನ ಬಿಕ್ಕಟ್ಟು ಶಮನವಾಗುವ ಲಕ್ಷಣಗಳೇ ಕಾಣುತ್ತಿಲ್ಲ.
ಅಪ್ಪ ಮಗನ ಕಾಳಗ ತಾರಕಕ್ಕೇರಿದ್ದು ಈಗಲೂ ನಾನೇ ರಾಷ್ಟ್ರೀಯ ಅಧ್ಯಕ್ಷ ಎಂದು ಮುಲಾಯಂ ಸಿಂಗ್ ಯಾದವ್ ಘೋಷಿಸಿದ್ದಾರೆ ಮತ್ತು ಪುತ್ರ ಅಖಿಲೇಶ್ ಕೇವಲ ಉತ್ತರ ಪ್ರದೇಶದ ಮುಖ್ಯಮಂತ್ರಿ ಎಂದಿದ್ದಾರೆ. 
 
ಭಾನುವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡುತ್ತಿದ್ದ ಮುಲಾಯಂ, ಈಗಲೂ ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಈ ಹಿಂದೆ ನಡೆದ ಪಕ್ಷದ ಕಾರ್ಯಕಾರಣಿ ಸಭೆ ಅಸಂವಿಧಾನಿಕ. ಪಕ್ಷದಿಂದ 6 ವರ್ಷಗಳ ಮಟ್ಟಿಗೆ ಉಚ್ಚಾಟಿತರಾಗಿರುವ ರಾಮ್ ಗೋಪಾಲ್‌ಗೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆಯುವ ಅಧಿಕಾರವಿಲ್ಲ. ಸಹೋದರ ಶಿವಪಾಲ್ ಈಗಲೂ ಪಕ್ಷದ ರಾಜ್ಯಾಧ್ಯರಾಗಿದ್ದಾರೆ, ಪಕ್ಷಕ್ಕೆ ಸಂಬಂಧಿಸಿದ ಇತರರ ಸಹಿಗಳೆಲ್ಲ ನಕಲಿ ಎಂದು ಸ್ಪಷ್ಟ ಪಡಿಸಿದ್ದಾರೆ.
 
ಈ ತಿಂಗಳ ಆರಂಭದಲ್ಲಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಸಿದ್ದ ರಾಮ್ ಗೋಪಾಲ್ ಯಾದವ್ ಅಖಿಲೇಶ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಘೋಷಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ