ಕೇದಾರನಾಥ್ ದೇವಾಲಯ ಪ್ರವೇಶಿಸುತ್ತಿದ್ದಂತೆ ಆಗ್ನಿಯಂತಹ ಶಕ್ತಿ ಪಡೆದ ಅನುಭವವಾಯಿತು: ರಾಹುಲ್ ಗಾಂಧಿ

ಶುಕ್ರವಾರ, 24 ಏಪ್ರಿಲ್ 2015 (16:40 IST)
ದೇವಸ್ಥಾನವನ್ನು ಪ್ರವೇಶಿಸಿದ ಕೂಡಲೇ ಅಗ್ನಿಯಂತಹಾ ಹೊಸ ಶಕ್ತಿಯೊಂದು ಪಡೆದ ಅನುಭವವಾಯಿತು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

ಕಳೆದ 2014ರಲ್ಲಿ ನಡೆದ ಜಲಪ್ರಳಯದಲ್ಲಿ ಜೀವ ಕಳೆದುಕೊಂಡ ಸಂತ್ರಸ್ಥರಿಗೆ ಗೌರವ ಸೂಚಿಸಲು ಇಲ್ಲಿಗೆ ಬಂದಿದ್ದೇನೆಯೇ ಹೊರತು ದೇವರ ಮುಂದೆ ಯಾವುದೇ ಬೇಡಿಕೆಯಿಡಲು ಬಂದಿಲ್ಲ ಎಂದು ತಿಳಿಸಿದ್ದಾರೆ.

ಸುಮಾರು 16 ಕಿ.ಮೀ ದೂರವನ್ನು ಸಾಮಾನ್ಯ ಭಕ್ತರಂತೆ ಕಾಲ್ನಡಿಗೆಯಲ್ಲಿ ಕ್ರಮಿಸಿದ ರಾಹುಲ್ ಗಾಂಧಿ, ದೇವರಿಗೆ ವರವನ್ನು ಕೇಳಲು ಬಂದಿಲ್ಲ. ನಾನು ಇಲ್ಲಿ ಬಂದಿರುವುದಕ್ಕೆ ಎರಡು ಉದ್ದೇಶಗಳಿವೆ ಎಂದು ಹೇಳಿದ್ದಾರೆ.

ಮೊದಲನೆಯದು 2013ರಲ್ಲಿ ಸಂಭವಿಸಿದ ಜಲಪ್ರಳಯದಲ್ಲಿ ಜೀವ ಕಳೆದುಕೊಂಡ ಸಂತ್ರಸ್ಥರಿಗೆ ಗೌರವ ಸಲ್ಲಿಸಲು ಬಂದಿದ್ದೇನೆ. ಒಂದು ವೇಳೆ ಕೇದಾರನಾಥ್‌ಗೆ ಹೆಲಿಕಾಪ್ಟರ್‌ನಲ್ಲಿ ತಲುಪಿದಲ್ಲಿ ಸಂತ್ರಸ್ಥರಿಗೆ ಅಗೌರವ ತೋರಿದಂತಾಗುತ್ತದೆ. ಆದ್ದರಿಂದ ಯಾತ್ರಿಕರು ಸಾಗುವ ಮಾರ್ಗದಲ್ಲಿಯೇ ಸಾಗಲು ನಿರ್ಧರಿಸಿದೆ ಎಂದರು.  

ಕೇದಾರನಾಥ್‌ನಲ್ಲಿ ಹಲವಾರು ಜನರು ಸಣ್ಣಪುಟ್ಟ ಉದ್ಯೋಗಿಗಳನ್ನು ಮಾಡುತ್ತಾರೆ.ಭಕ್ತರಿಗೆ ಸಕಲ ಸೌಲಭ್ಯ ಒದಗಿಸಲು ಹರಸಾಹಸ ಪಡುತ್ತಾರೆ. ಜಲಪ್ರಳಯವಾದ ನಂತರ ಆತಂಕದಲ್ಲಿ ಅವರು ಜೀವನ ಕಳೆಯುತ್ತಿದ್ದಾರೆ. ನಾನು ಕಾಲ್ನಡಿಗೆಯಲ್ಲಿ ತೆರಳಿದಲ್ಲಿ ಸಹೋದರರಿಗೆ ಧೈರ್ಯ, ಉತ್ಸಾಹ ತುಂಬಿದಂತಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.  

ಯಾವುದೇ ದೇವಾಲಯಕ್ಕೆ ನಾನು ಹೋದರು ದೇವರ ಮುಂದೆ ಯಾವುದೇ ಬೇಡಿಕೆಯಿಡುವುದಿಲ್ಲ. ಇದು ನನ್ನ ಹವ್ಯಾಸ. ಆದರೆ, ನಾನು ದೇವಸ್ಥಾನದ ಗರ್ಭಗುಡಿ ಪ್ರವೇಶಿಸುತ್ತಿದ್ದಂತೆ ಅಗ್ನಿಯಂತಹ ಹೊಸ ಶಕ್ತಿ ಬಂದಂತಾಗುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ