8/11 ಬಳಿಕ ಪತ್ತೆಯಾದದ್ದು 4,807 ಕೋಟಿ ರೂ. ಕಪ್ಪುಹಣ

ಸೋಮವಾರ, 9 ಜನವರಿ 2017 (07:53 IST)
500 ಮತ್ತು 1,000 ಮುಖಬೆಲೆಯ ಹಳೆಯ ನೋಟುಗಳನ್ನು ರದ್ದುಗೊಳಿಸುವಾಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 3 ಲಕ್ಷ ಕೋಟಿ ಕಪ್ಪುಹಣ ಹಿಂತಿರುಗುತ್ತದೆ ಎಂಬ ನಿರೀಕ್ಷೆಯನ್ನಿಟ್ಟುಕೊಂಡಿತ್ತು. ಆದರೆ ಜನವರಿ 5ರವರೆಗೆ ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದ್ದು ಈ ಫಿಗರ್‌ನ 1.6 ಪ್ರತಿಶತ ಮಾತ್ರ, ಅಂದರೆ ಕೇವಲ 4,807 ಕೋಟಿ ರೂಪಾಯಿ.

 
ಹೌದು, ನವೆಂಬರ್ 8ರ ನಂತರ  ಕಪ್ಪುಹಣದ ವಿರುದ್ಧದ ಕಾರ್ಯಾಚರಣೆಯಲ್ಲಿ ಇದುವರೆಗೆ 4,807 ಕೋಟಿ ರೂಪಾಯಿ, ಅಘೋಷಿತ ಆದಾಯವನ್ನು ಪತ್ತೆಹಚ್ಚಿರುವ ಇಲಾಖೆ,112.8 ಕೋಟಿ ರೂಪಾಯಿ ಹೊಸ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಂಡಿದೆ.
 
ಒಟ್ಟು 1,138 ಕಡೆಗಳಲ್ಲಿ  ಶೋಧ ಕಾರ್ಯ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ತೆರಿಗೆ ವಂಚನೆ, ಹವಾಲಾದಂತಹ ಹಣ ಕಳ್ಳಸಾಗಣೆ ಆರೋಪದಡಿ 5183 ನೋಟಿಸ್ ಜಾರಿ ಮಾಡಿದೆ.
 
609.39 ಕೋಟಿ ರೂಪಾಯಿ ಬೆಲೆಬಾಳುವ ನಗದು ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು 112.8 ಕೋಟಿ ಹೊಸ ಕರೆನ್ನಿ ನೋಟುಗಳು ಪತ್ತೆಯಾಗಿವೆ.  ಅದರಲ್ಲಿ ಹೆಚ್ಚಿನವು 2,000 ರೂಪಾಯಿ ನೋಟುಗಳಾಗಿವೆ.
 
ವಶಪಡಿಸಿಕೊಳ್ಳಲಾದ ಆಭರಣಗಳ ಒಟ್ಟು ಮೊತ್ತ 97.8. ಹೆಚ್ಚಿನ ದೊಡ್ಡ ಗಳಿಕೆಗಳು ಚೆನ್ನೈ ನಿಂದ ಬಂದಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ