ಮತಎಣಿಕೆಯನ್ನು ಬಹಿಷ್ಕರಿಸಿ ಕೋರ್ಟ್‌ಗೆ ಹೋಗುತ್ತೇನೆ: ಟ್ರಾಫಿಕ್ ರಾಮಸ್ವಾಮಿ

ಮಂಗಳವಾರ, 30 ಜೂನ್ 2015 (09:07 IST)
ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಕಣಕ್ಕಿಳಿದಿರುವ ಆರ್.ಕೆ.ನಗರ್  ವಿಧಾನ ಕ್ಷೇತ್ರದ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಳ್ಳುತ್ತಿದ್ದು  ಈಗಾಗಲೇ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದೆ.
ಮರೀನಾ ಬೀಚ್ ಬಳಿಯ ರಾಣಿಮೇರಿ ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ ನಡೆಯುತ್ತಿದೆ. ಜಯಾ ವಿರುದ್ಧ ಕಣಕ್ಕಿಳಿದಿರುವ ಪಕ್ಷೇತರ ಅಭ್ಯರ್ಥಿ, ಸಾಮಾಜಿಕ ಹೋರಾಟಗಾರ ಟ್ರಾಫಿಕ್ ರಾಮಸ್ವಾಮಿ ಮತ ಕೇಂದ್ರಕ್ಕೆ  ಕ್ಯಾಮರಾ ಸಮೇತ ಬಂದಿದ್ದು ಪೊಲೀಸರು ಅವರನ್ನು ಒಳ ಹೋಗದಂತೆ ತಡೆದಿದ್ದಾರೆ. 
 
ಹೀಗಾಗಿ ಅಸಮಾಧಾನಗೊಂಡ ಟ್ರಾಫಿಕ್ ರಾಮಸ್ವಾಮಿ  ಮತ ಕೇಂದ್ರದ ಹೊರಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 
 
"ಮತ ಎಣಿಕೆ ಕೇಂದ್ರದ ಸುತ್ತ ಎಐಡಿಎಂಕೆ ಪಕ್ಷದ ಗೂಂಡಾಗಳಿದ್ದಾರೆ.ಚುನಾವಣಾ ಅಧಿಕಾರಿ ಒಳಗೊಂಡಂತೆ ಎಲ್ಲರೂ ಎಐಡಿಎಂಕೆ ಕಾರ್ಯಕರ್ತರೆ. ಹಾಗಾಗಿ ನ್ಯಾಯಸಮ್ಮತ ಮತಎಣಿಕೆ ನಡೆಯಲು ಸಾಧ್ಯವಿಲ್ಲ. ಮತಎಣಿಕೆಯನ್ನು ಬಹಿಷ್ಕರಿಸಿ ನ್ಯಾಯಾಲಯದ ಮೆಟ್ಟಿಲೇರುತ್ತೇನೆ",  ಎಂದು  ರಾಮಸ್ವಾಮಿ ಗುಡುಗಿದ್ದಾರೆ. 
 
ಈಗಾಗಲೇ ಎರಡು ಸುತ್ತಿನ ಮತಎಣಿಕೆ ಸಂಪೂರ್ಣಗೊಂಡಿದ್ದು, ಜಯಾ 18,000 ಮತಗಳ ಮುನ್ನಡೆ ಸಾಧಿಸಿದ್ದಾರೆ. ರಾಮಸ್ವಾಮಿ ಕೇವಲ 350 ಮತಗಳನ್ನು ಪಡೆದಿದ್ದಾರೆ. ಒಟ್ಟು 17 ಸುತ್ತಿನ ಮತಎಣಿಕೆ ನಡೆಯಲಿದೆ. 

ವೆಬ್ದುನಿಯಾವನ್ನು ಓದಿ