ಜಯಲಲಿತಾ ಸಾವಿನ ಕುರಿತು ತನಿಖೆಗೆ ಆದೇಶಿಸುತ್ತೇನೆ: ಪನ್ನೀರ್ ಸೆಲ್ವಂ

ಬುಧವಾರ, 8 ಫೆಬ್ರವರಿ 2017 (11:16 IST)
ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿದ್ದು, ನಾನು ಅಮ್ಮ ಜಯಲಲಿತಾ ಅವರ ಜಯಲಲಿತಾ ಸಾವಿನ ಕುರಿತು ತನಿಖೆಗೆ ಆದೇಶಿಸುತ್ತೇನೆ ಎಂದು ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಘೋಷಿಸಿದ್ದಾರೆ.
ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮೆಲ್ಲರಿಗೂ ದೇವರಂತಿದ್ದ ಜೆ.ಜಯಲಲಿತಾ ಅವರ ಸಾವಿನ ಕುರಿತು ಶೀಘ್ರದಲ್ಲಿಯೇ ತನಿಖೆ ನಡೆಸುವಂತೆ ಆದೇಶಿಸುತ್ತೇನೆ. ಈ ಕುರಿತು ಹೈಕೋರ್ಟ್ ನಿವೃತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುತ್ತೇನೆ. ಅಮ್ಮನ ಸಾವಿನ ಕುರಿತು ಸತ್ಯಾಂಶ ಏನಿದೆ ಎಂದು ಹೇಳುವುದು ಸರಕಾರದ ಕರ್ತವ್ಯ ಎಂದು ಸ್ಪಷ್ಟಪಡಿಸಿದರು. 
 
ಎಂಜಿಆರ್ ಹಾಗೂ ಅಮ್ಮನ ಕನಸಿನಂತೆಯೇ ಎಐಎಡಿಎಂಕೆ ಪಕ್ಷ ನಡೆಯಲಿದೆ. ಪಕ್ಷದ ವಿರುದ್ಧ ನಾನು ಯಾವುದೇ ಹೇಳಿಕೆ ನೀಡಿಲ್ಲ. ಅಮ್ಮ ತೋರೆಸಿಕೊಟ್ಟ ಹಾದಿಯಲ್ಲಿಯೇ ನಡೆಯುತ್ತೇನೆ. ತಮಿಳುನಾಡು ವಿಧಾನಸಭೆಯಲ್ಲಿ ನನ್ನ ಶಕ್ತಿ ಪ್ರದರ್ಶನ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು. 
 
ನಾನು ತಮಿಳುನಾಡಿನ ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿ. ಮತದಾರರ ಆಶಯದಂತೆ ನಡಯಲೇಬೇಕಿದೆ. ಜಯಲಲಿತಾ ಅವರು ತೋರಿಸಿರುವ ಹಾದಿಯಲ್ಲಿ ಬೆಳೆಯುತ್ತೇನೆ. ಈ ಕುರಿತು ಅಗತ್ಯ ನೆರವು ನೀಡುವುದಾಗಿ ಕೇಂದ್ರ ಸರಕಾರ ಭರವಸೆ ನೀಡಿದೆ ಎಂದರು.
 
ಜಯಲಲಿತಾ ಅವರ ಸಂಬಂಧಿ ದೀಪಾ ಅವರ ಬಗ್ಗೆ ಅಪಾರ ಗೌರವ ಇದೆ. ಅವರಿಗೆ ನನ್ನ ಬೆಂಬಲ ಸದಾ ಇರುತ್ತದೆ. ಅದರಂತೆ ದೀಪಾ, ಜಯಕುಮಾರ್ ಅವರು ಸಹ ನನಗೆ ಬೆಂಬಲ ನೀಡಲಿದ್ದಾರೆ ಎಂದು ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ವಿಶ್ವಾಸ ವ್ಯಕ್ತಪಡಿಸಿದರು. 

ವೆಬ್ದುನಿಯಾವನ್ನು ಓದಿ