ಮಹಿಳೆಯರು ಹೀಗೆ ಸಾಧನೆ ಮುಂದುವರಿಸಿದರೆ ಪುರುಷರು ಮೀಸಲಾತಿಗೆ ಪ್ರತಿಭಟನೆ ಮಾಡುವ ದಿನಗಳು ಬರಬಹುದು: ಮೋದಿ

ಬುಧವಾರ, 20 ಏಪ್ರಿಲ್ 2016 (15:32 IST)
ಕತ್ರ: ಜಿಮ್ನಾಸ್ಟಿಕ್ ಮಹಿಳಾ ವಿಭಾಗದಲ್ಲಿ ಒಲಿಂಪಿಕ್ ಪಂದ್ಯಕ್ಕೆ ಪ್ರಪ್ರತಮವಾಗಿ ಆಯ್ಕೆಯಾಗಿರುವ ದೀಪಾ ಕರ್ಮಕರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಮಹಿಳೆಯರು ಇದೇ ರೀತಿ ಸಾಧನೆ ಮುಂದುವರಿಸಿದರೆ ಮುಂಬರುವ ದಿನಗಳಲ್ಲಿ ಪುರುಷರು ಮೀಸಲಾತಿಗಾಗಿ ಪ್ರತಿಭಟನೆ ನಡೆಸುವ ಸಮಯ ಬರುತ್ತದೆ ಎಂದು ಹೇಳಿದರು.
ನಿನ್ನೆಯಷ್ಟೇ ಭಾರತದ ಹೆಣ್ಣು ಮಗಳು ರಿಯೋ ಒಲಿಂಪಿಕ್ಸ್‌ಗೆ ಆಯ್ಕೆಯಾಗುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾಳೆ. ಇಂತಹ ಮಹಿಳೆಯರು ಇತರರಿಗೆ ಮಾದರಿಯಾಗುತ್ತಾರೆ. ಎಂದು ಜಮ್ಮುವಿನ ಕತ್ರ ಪ್ರದೇಶದ ಶ್ರೀ ಮಾತ ವೈಷ್ಣೋದೇವಿ ವಿಶ್ವವಿದ್ಯಾಲಯದ 5ನೇ ಪದವಿ ಪ್ರಧಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
 
ಹುಡುಗಿಯರು ಪದಕ ಗೆಲ್ಲುವುದನ್ನು ನೋಡಿ ಮಾತಾ ವೈಷ್ಣೋದೇವಿಗೆ ಖುಷಿಯಾಗುತ್ತದೆ. ಮಹಿಳೆಯರು ಇದೇ ರೀತಿ ಸಾಧನೆ ಮುಂದುವರಿಸಿದರೆ ಮುಂಬರುವ ದಿನಗಳಲ್ಲಿ ಪುರುಷರು ಮೀಸಲಾತಿಗಾಗಿ ಪ್ರತಿಭಟನೆ ನಡೆಸುವ ಸಮಯ ಬರುತ್ತದೆ. ಹೆಣ್ಣುಮಕ್ಕಳು ಓದಿಗಾಗಿ ಪ್ರೋತ್ಸಾಹಿಸುವ ಎಲ್ಲಾ ತಾಯಂದಿರಿಗೆ ನನ್ನ ಅಭಿನಂದನೆಗಳು ಎಂದು ಹೇಳಿದರು.
 
ಉತ್ತಮ ಜ್ಞಾನವನ್ನು ಬಳಸಿಕೊಂಡು ದೇಶ ಮತ್ತು ಮಾನವ ಸೇವೆಯಲ್ಲಿ ತೊಡುಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
 
ದಿವಂಗತ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಮತ್ತು ಪರ್ವತ ಮನುಷ್ಯ ಮಂಜಿ ಅವರನ್ನು ಉದಾಹರಣೆಯಾಗಿಸಿ,  ಯಶಸ್ಸು ಯಾವಾಗಲು ಸಂಪನ್ಮೂಲದಿಂದ ಬರುವುದಿಲ್ಲ, ಅದಕ್ಕೆ ದೃಢ ನಿರ್ಧಾರ ಮತ್ತು ಕಠಿಣ ಪರಿಶ್ರಮ ಅವಶ್ಯಕ ಎಂದು ಮೋದಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ