ಅಕ್ರಮ ಬಿಎಸ್‌ಎನ್‌ಎಲ್ ಲೈನ್: ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ವಿಚಾರಣೆ ನಡೆಸಿದ ಸಿಬಿಐ

ಬುಧವಾರ, 1 ಜುಲೈ 2015 (16:14 IST)
ತಮ್ಮ ನಿವಾಸದಲ್ಲಿ ಸುಮಾರು 300ಕ್ಕೂ ಹೆಚ್ಚು ಹೈ ಡೇಟಾ ಕ್ಯಾಪಾಸಿಟ್ ಹೊಂದಿರುವ ಬಿಎಸ್‌ಎನ್‌ಎಲ್ ಲೈನ್‌ಗಳನ್ನು ಅನಧಿಕೃತವಾಗಿ ಹೊಂದಿದ್ದ ಆರೋಪದ ಮೇಲೆ ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಅವರನ್ನು ಸಿಬಿಐ ವಿಚಾರಣೆ ನಡೆಸಿದೆ.  
 
ಬಿಎಸ್‌ಎನ್‌ಎಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ದಯಾನಿಧಿ ಮಾರನ್, ಮದ್ರಾಸ್ ಹೈಕೋರ್ಟ್‌ನಲ್ಲಿ ಜಾಮೀನು ಕೋರಿ ಸಲ್ಲಿಸಿದ ಅರ್ಜಿಗೆ ಮಾನ್ಯತೆ ನೀಡಿ ಮಾರನ್ ಮತ್ತು ಸನ್ ಟಿವಿಗೆ ಸೇರಿದ ಇಬ್ಬರು ಅಧಿಕಾರಿಗಳಿಗೆ ಕೋರ್ಟ್ ಜಾಮೀನು ನೀಡಿತ್ತು.    
        
ದಯಾನಿಧಿ ಮಾರನ್ ಟೆಲಿಕಾಂ ಖಾತೆಯ ಸಚಿವರಾಗಿದ್ದಾಗ  ಬಿಎಸ್ಎನ್‌ಎಲ್ ಜನರಲ್ ಮ್ಯಾನೇಜರ್ ಹೆಸರಿನಲ್ಲಿದ್ದ ಸುಮಾರು 323 ರೆಸಿಡೆನ್ಸಿಯಲ್ ಲೈನ್‌ಗಳನ್ನು ಸನ್ ಟಿವಿ ಕಚೇರಿಗೆ ಹಾಗೂ ಅವರ ಅಧಿಕೃತ ನಿವಾಸಕ್ಕೆ ಸಂಪರ್ಕ ನೀಡಲಾಗಿತ್ತು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.   
 
ಮೂಲಗಳ ಪ್ರಕಾರ ಬಿಎಸ್‌ಎನ್‌ಎಲ್ ಲೈನ್‌ಗಳು ಸಾಮಾನ್ಯ ಟೆಲಿಫೋನ್‌ ಲೈನ್‌ಗಳಾಗಿರಲಿಲ್ಲ. ಬದಲಾಗಿ ತುಂಬಾ ದುಬಾರಿಯಾದ ಐಎಸ್‌ಡಿಎನ್ ಲೈನ್‌ಗಳಾಗಿದ್ದವು. ಐಎಸ್‌ಡಿಎನ್ ಲೈನ್‌ಗಳಿಂದ ಟಿವಿ ಸುದ್ದಿ ಮತ್ತು ಕಾರ್ಯಕ್ರಮಗಳನ್ನು ಅತಿ ವೇಗವಾಗಿ ವಿಶ್ವದಾದ್ಯಂತ ಬಿತ್ತರಿಸಲು ಸಾಧ್ಯವಾಗುತ್ತದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ