ಪ್ರಧಾನಿ ಮೋದಿಯನ್ನು ಹಿಂದಕ್ಕೆ ತಳ್ಳಿದ ಸನ್ನಿ ಲಿಯೋನ್!

ಗುರುವಾರ, 18 ಡಿಸೆಂಬರ್ 2014 (13:07 IST)
ಬಾಲಿವುಡ್ ನಟಿ ಸನ್ನಿ ಲಿಯೋನ್ ಗೂಗಲ್‌ನಲ್ಲಿ ಅತಿ ಹೆಚ್ಚು  ಹುಡುಕಾಡಲ್ಪಟ್ಟ ಇಂಡಿಯನ್ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಯನ್ನು ಕಾದುಕೊಂಡಿದ್ದಾರೆ. ಇಂಡಿಯಾ- ಕೆನಡಿಯನ್ ಮತ್ತು ಅಮೇರಿಕನ್ ಮೂಲದ ಈ ನೀಲಿ ತಾರೆ, ಕಳೆದ 3 ವರ್ಷಗಳಿಂದ ಗೂಗಲ್ ಹುಡುಕಾಟದಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ. 
ವಿಶೇಷವೆಂದರೆ ಅಂತರ್ಜಾಲದ ಹುಡುಕಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಸನ್ನಿ ಹಿಂದಿಕ್ಕಿದ್ದಾರೆ. 2014ನೇ ಸಾಲಿನಲ್ಲಿ ಅಂತರ್ಜಾಲದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಯೆಂದು ನರೇದ್ರ ಮೋದಿಯವರೆಂದು ಈ ಹಿಂದೆ ಗೂಗಲ್ ಇಂಡಿಯಾ ಸಂಸ್ಥೆ ತಿಳಿಸಿತ್ತು.
 
ಆದರೆ ಇತ್ತೀಚೆಗೆ ಮೋದಿಯನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿರುವ ಫೋರ್ನ್ ನಟಿ ಸನ್ನಿ ಪ್ರಥಮ ಸ್ಥಾನವನ್ನು ಪುನಃ ಗಿಟ್ಟಿಸಿಕೊಂಡಿದ್ದಾರೆ.
 
ಬಾಲಿವುಡ್ ನಟ ಸಲ್ಮಾನ್ ಖಾನ್, ಬಾಲಿವುಡ್ ಬೆಡಗಿ ಕತ್ರೀನಾ ಕೈಫ್ ಮತ್ತು ದೀಪಿಕಾ ಪಡುಕೋಣೆ  ಕ್ರಮವಾಗಿ 3,4 ಮತ್ತು 5ನೇ ಸ್ಥಾನದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ