ನಿರಾಶ್ರಿತ ಸ್ಲಮ್‌‌ವಾಸಿಗಳಿಗೆ ಆಶ್ರಯ ನೀಡಿದ ಆನಂದ್ ಕುಟುಂಬ

ಬುಧವಾರ, 9 ಡಿಸೆಂಬರ್ 2015 (08:31 IST)
ಶತಮಾನದ ಮಹಾಮಳೆಯಿಂದ ನಲುಗಿ ಹೋಗಿರುವ ಚೆನ್ನೈನಲ್ಲಿ ನಿರಾಶ್ರಿತರಿಗೆ  ತಮ್ಮ ಮನೆಯಲ್ಲೇ ಆಶ್ರಯ ನೀಡುವ ಮೂಲಕ ಭಾರತದ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಕುಟುಂಬ ಮಾನವೀಯತೆ ಮೆರೆದಿದೆ.

 ಆನಂದ್ ಚೆನ್ನೈನಲ್ಲಿಲ್ಲ. ಲಂಡನ್ ಕ್ಲಾಸಿಕ್ ಚೆಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಅವರು ಹಲವು ದಿನಗಳ ಹಿಂದೆ ಇಂಗ್ಲೆಂಡ್‌ಗೆ ತೆರಳಿದ್ದರೂ, ಪತ್ನಿ ಅರುಣಾ ತಮ್ಮ ಮನೆಯ ಬಳಿ ಇರುವ ಸ್ಲಮ್ ನಿವಾಸಿಗಳಿಗೆ  ತಮ್ಮ ನಿವಾಸದಲ್ಲಿಯೇ ಆಶ್ರಯವನ್ನು ನೀಡಿದ್ದಾರೆ.

 ‘4 ವರ್ಷದ ಅಖಿಲ್ (ಆನಂದ್ ಪುತ್ರ) ಹಾಗೂ ಮಾವ ವಿಶ್ವನಾಥನ್ ಅಯ್ಯರ್‌ರನ್ನು ನೋಡಿಕೊಳ್ಳಬೇಕಿರುವ ಕಾರಣ ಪ್ರವಾಹದ ವೇಳೆ ಸಹಾಯ ಮಾಡಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಸಂತ್ರಸ್ತರಿಗೆ ಮನೆಯಲ್ಲಿ ಆಶ್ರಯ ನೀಡುವ ನಿರ್ಧಾರ ಮಾಡಿದೆವು. ಮೊದಲ ಬಾರಿಗೆ ಪ್ರವಾಹ ಬಂದಾಗಲೇ ನಾವು ಸ್ಲಮ್ ನಿವಾಸಿಗಳಿಗೆ ನಮ್ಮ  ಮನೆಯಲ್ಲಿ ತಂಗಲು ಅವಕಾಶ ನೀಡಿದ್ದೆವು.  ಈಗ ಮತ್ತೆ ಮಹಾಪ್ರವಾಹ  ಬಂದಾಗ ಮತ್ತೆ 15 ರಿಂದ 20  ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿದ್ದೇವೆ. ಅವರಲ್ಲಿ ಇಬ್ಬರು ಗರ್ಭಿಣಿಯರಿದ್ದಾರೆ ಎಂದು ಆನಂದ್ ಪತ್ನಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ