13 ವರ್ಷದ ಬಾಲೆಯ ಮೇಲೆ ವಾಟ್ಸ್‌ಅಪ್ ಸ್ನೇಹಿತನಿಂದ ಅತ್ಯಾಚಾರ

ಭಾನುವಾರ, 28 ಡಿಸೆಂಬರ್ 2014 (16:44 IST)
13 ವರ್ಷದ ಬಾಲಕಿಯೊಬ್ಬಳು  ಇಂಟರ್ನೆಟ್ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸ್‌ಅಪ್ ಮೂಲಕ ಸ್ನೇಹಿತನಾದ 22 ವರ್ಷದ ಯುವಕನಿಂದ ಅತ್ಯಾಚಾರಕ್ಕೆ ಒಳಗಾದ ಘಟನೆ ನವದೆಹಲಿಯಲ್ಲಿ ನಡೆದಿದೆ. 
7 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಸ್ನೇಹಿತ ಪವನ್ ಎಂಬಾತ ಈ ಘೋರ ಕೃತ್ಯಕ್ಕೆ ಕಾಫಣನಾಗಿದ್ದಾನೆ. ಘಟನೆ ಕುರಿತು ಬಾಲಕಿಯ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
 
ಬಾಲಕಿ ಮತ್ತು ಆಕೆಯ ತಾಯಿ ನೀಡಿರುವ ಹೇಳಿಕೆಯ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದ್ದು , ಪೊಸ್ಕೋ ಕಾಯಿದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ. 
 
ಆರೋಪಿ ಪೀಡಿತಳ ಕುಟುಂಬಸ್ಥರಿಗೆ ಪರಿಚಿತನಾಗಿದ್ದು, ಪೂರ್ವದೆಹಲಿಯ ಮನ್ಸರೋವರ್ ಪಾರ್ಕ ಏರಿಯಾದಲ್ಲಿರುವ ಅವರ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ ಎಂದು ತಿಳಿದು ಬಂದಿದೆ.  
 
ಇತ್ತೀಚಿಗೆ  ಬಾಲಕಿಯ ಜತೆ ಮೊಬೈಲ್ ಸಂಖ್ಯೆಯನ್ನು ವಿನಿಮಯ ಮಾಡಿಕೊಂಡಿದ್ದ ಆತ ವಾಟ್ಸ್‌ಅಪ್ ಮೂಲಕ ಆಕೆಗೆ ಹತ್ತಿರವಾಗಿದ್ದ.  ಬಾಲಕಿಯ ಹದಿವಯಸ್ಸು ಮತ್ತು ಮುಗ್ಧತೆಯನ್ನು ದುರ್ಬಳಕೆ ಮಾಡಿಕೊಂಡ ಆತ ಅನೇಕ ಸಂದರ್ಭಗಳಲ್ಲಿ ಆಕೆಯ ಜತೆ ದೈಹಿಕ ಸಂಪರ್ಕವನ್ನು ನಡೆಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಅವರಿಬ್ಬರ ಸ್ನೇಹದ ಕುರಿತು ಪಾಲಕರಿಗೆ ತಿಳಿದು ಆತನ ಜತೆ ಸಂಬಂಧ ಕಡಿದುಕೊಳ್ಳುವಂತೆ ಬಾಲಕಿಗೆ ಸೂಚಿಸಿದರು. ಆದರೆ ಪವನ್ ಜತೆಗೆ ತನಗೆ ದೈಹಿಕ ಸಂಬಂಧವಿರುವುದನ್ನು ಬಹಿರಂಗಗೊಳಿಸಿದ ಬಾಲಕಿ ತಾನು ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಳು. 
 
ಆಕೆಯ ವೈದ್ಯಕೀಯ ತಪಾಸಣೆ ನಡೆಸಿದ ಆಕೆಯ ಪಾಲಕರು ಪೊಲೀಸರಲ್ಲಿ ದೂರು ನೀಡಿದರು. 

ವೆಬ್ದುನಿಯಾವನ್ನು ಓದಿ