ದೇಶದ ಏಳಿಗೆಗಾಗಿ ಬದುಕುತ್ತೇನೆ, ಸ್ವಂತಕ್ಕಲ್ಲ: ಮೋದಿ ಘೋಷಣೆ

ಮಂಗಳವಾರ, 20 ಮೇ 2014 (14:27 IST)
ದೇಶದ ಅಭಿವೃದ್ಧಿಗಾಗಿ ನಾನು ಜೀವಿಸುತ್ತೇನೆಯೇ ಹೊರತು ನನ್ನ ಸ್ವಾರ್ಥಕ್ಕಾಗಿ ಅಲ್ಲ ಎಂದು ಭಾವಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಘೋಷಿಸಿದ್ದಾರೆ.
 
ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಮೊದಲ ಬಾರಿಗೆ ಪ್ರವೇಶಿಸಿ ಸಭೆಯಲ್ಲಿ ಮಾತನಾಡಿದ ಮೋದಿ, ಬಿಜೆಪಿ ಪಕ್ಷ ಯಾವುದೇ ಸ್ಥಾನ ಪಡೆಯಲು ಸಂಸತ್ತನ್ನು ಪ್ರವೇಶಿಸಿಲ್ಲ. ಹೊಣೆಗಾರಿಕೆಯನ್ನು ನಿಭಾಯಿಸಲು ಸಂಸತ್ತನ್ನು ಪ್ರವೇಶಿಸಿದೆ ಎಂದರು. 
 
ದೇಶ ಮತ್ತು ಬಿಜೆಪಿ ನನಗೆ ತಾಯಿಯಿದ್ದಂತೆ. ಪುತ್ರ ತಾಯಿಯ ಮೇಲೆ ಯಾವುದೇ ಕೃಪೆಯನ್ನು ತೋರುವುದಿಲ್ಲ. ತಾಯಿಗಾಗಿ ಮಗ ಸರ್ವತ್ಯಾಗಕ್ಕೆ ಸಿದ್ದನಾಗಿರುತ್ತಾನೆ ಎಂದು ಆಡ್ವಾಣಿಯವರ ಹೇಳಿಕೆಗೆ ಮೋದಿ ಉತ್ತರಿಸಿದರು.
 
ಚುನಾವಣೆಗಳಲ್ಲಿ ಸೋಲು ಗೆಲುವು ಪ್ರಜಾಪ್ರಭುತ್ವದಲ್ಲಿ ಸರ್ವೆಸಾಮಾನ್ಯ. ಆದರೆ, ಒಂದು ಬಾರಿ ಅದಿಕಾರಕ್ಕೆ ಬಂದ ನಂತರ ದೇಶದ ಪ್ರಗತಿಯ ಬಗ್ಗೆ ಚಿಂತನೆ ನಡೆಸುವುದು ಅಗತ್ಯವಾಗಿದೆ. ಕೆಟ್ಟಗಳಿಗೆಗಳನ್ನು ಮರೆತು ಆಶಾವಾದಿಗಳಾಗಿ ಜೀವಿಸಬೇಕಾಗಿದೆ ಎಂದರು.
 
ಸಭೆಯಲ್ಲಿ ನರೇಂದ್ರ ಮೋದಿಯವರನ್ನು ಹಿರಿಯ ನಾಯಕ ಆಡ್ವಾಣಿ ಬಿಜೆಪಿ ಪಕ್ಷದ ನಾಯಕರನ್ನಾಗಿ ಅನುಮೋದಿಸಿದರು. ಮುರಳಿ ಮನೋಹರ್ ಜೋಷಿ, ವೆಂಕಯ್ಯ ನಾಯ್ಡು, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಬೆಂಬಲಿಸಿದರು.
 
ನರೇಂದ್ರ ಮೋದಿ ನೇತೃತ್ವದ ಬಿಜೆಪಿ 545 ಕ್ಷೇತ್ರಗಳ ಲೋಕಸಭೆ ಚುನಾವಣೆಯಲ್ಲಿ 282 ಕ್ಷೇತ್ರಗಳಲ್ಲಿ ಜಯಬೇರಿ ಬಾರಿಸಿ ಮೊದಲ ಬಾರಿಗೆ ಭಾರಿ ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್ಸೇತರ ಪಕ್ಷವಾಗಿದೆ.
 

ವೆಬ್ದುನಿಯಾವನ್ನು ಓದಿ