ಉತ್ತರಪ್ರದೇಶ ಚುನಾವಣೆ : ದಲಿತರೊಂದಿಗೆ ಭೋಜನ ಸವಿಯಲಿರುವ ಅಮಿತ್ ಶಾ

ಮಂಗಳವಾರ, 31 ಮೇ 2016 (12:10 IST)
ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಮತದಾರರನ್ನು ಓಲೈಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಇಂದು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವುದಲ್ಲದೇ ದಲಿತರೊಂದಿಗೆ ಭೋಜನ ಸೇವಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಉತ್ತರಪದೇಶದ ಸಹರಣಪುರ್ ಜಿಲ್ಲೆಯಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ನಾಲ್ಕು ದಿನಗಳ ನಂತರ, ಅಮಿತ್ ಶಾ ವಾರಣಾಸಿಯಲ್ಲಿ ಬಿಜೆಪಿ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. 
 
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಓಲೈಸುವುದಲ್ಲದೇ ಮೋದಿ ಸರಕಾರದ ಸಾಧನೆಗಳ ಬಗ್ಗೆ ಜನತೆಗೆ ಅಮಿತ್ ಶಾ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
 
ಕೇಂದ್ರ ಸರಕಾರ ಕೈಗಾರಿಕೋದ್ಯಮಿಗಳ ಪರ ಮತ್ತು ರೈತರ ವಿರೋಧಿ ಎನ್ನುವ ಆರೋಪಗಳು ಬಿಜೆಪಿಯನ್ನು ಕಾಡುತ್ತಿದ್ದು, ಕೇಂದ್ರ ಸರಕಾರದ ಕೃಷಿ ವಿಮೆ ಯೋಜನೆ, ಜನ ಧನ ಯೋಜನೆ ಬಗ್ಗೆ ಮತದಾರರಿಗೆ ಅಮಿತ್ ಶಾ ಮಾಹಿತಿ ನೀಡಲಿದ್ದಾರೆ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.
 
 ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಜೂನ್ 12 ಮತ್ತು ಜೂನ್ 13 ರಂದು ನಡೆಯಲಿರುವುದರಿಂದ ಅನೇಕ ಹಿರಿಯ ಕಾಂಗ್ರೆಸ್ ನಾಯಕರು ವಾರಣಾಸಿಯಲ್ಲಿಯೇ ಬಿಡಾರ ಹೂಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ