ದೇಶಾದ್ಯಂತ 70ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ.. ಕೆಂಪುಕೋಟೆಯಲ್ಲಿ ಪ್ರಧಾನಿ ಭಾಷಣ

ಸೋಮವಾರ, 15 ಆಗಸ್ಟ್ 2016 (10:35 IST)
ದೇಶಾದ್ಯಂತ 70ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ  ಪ್ರಧಾನಿ ಮೋದಿ ಶುಭಾಷಯ ತಿಳಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಮಹಾತ್ಮಗಾಂಧಿ, ನೆಹರು, ಸುಭಾಷ್ ಚಂತ್ರ ಬೋಸ್ ಸೇರಿದಂತೆ ಹಲವು ನಾಯಕರು ದೇಶದ ಪ್ರಜೆಗಳ ಜತೆಗೆ ಒಗ್ಗೂಡಿ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟರು ಎಂದು ನೆನಪಿಸಿಕೊಂಡಿದ್ದಾರೆ. 
ನಮ್ಮ ರೈತರು ದೇಶದ ಅನ್ನವನ್ನು ತುಂಬಿಸಲು ಶ್ರಮಿಸುತ್ತಿದ್ದಾರೆ. ಇಂದು ನಾನು ನಮ್ಮ ರೈತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಶ್ರಮದಿಂದ ಆಹಾರ ಉತ್ಪಾದನೆಯಲ್ಲಿ ಶೇ 20 ರಷ್ಟು ಹೆಚ್ಚಳ ಕಂಡಿದ್ದೇವೆ. 'ಕೃಷಿ ಸಿಂಚನಿ' ಯೋಜನೆ ಸೇರಿದಂತೆ ಹಲವು ರೈತರಿಗಾಗಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. 
 
ಸರ್ದಾರ್ ವಲ್ಲಭಾಯಿ ಪಟೇಲ್ ದೇಶವನ್ನು ಕಟ್ಟಲು ಶ್ರಮಿಸಿದರು. ದೇಶದ ಎಲ್ಲಾ ಯೋಧರು, ನಾಯಕರು ಸ್ವಾತಂತ್ರ್ಯ ಹೋರಾಟಗಾರರ ಮಾಡಿದ ಅತ್ಯುನ್ನತ ಕೆಲಸದಿಂದ ನಾವು ಇಂದು ನೆಮ್ಮದಿಯ ಉಸಿರಾಡುತ್ತಿದ್ದೇವೆ ಎಂದು ತಿಳಿಸಿದರು. 
 
ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಆನ್ ಲೈನ್‌ನಲ್ಲಿ ಸಾಕಷ್ಟು ಸೌಲಭ್ಯ ಒದಗಿಸಲಾಗಿದೆ. ಸಾಮಾನ್ಯ ಜನರಲ್ಲಿ ಬದಲಾವಣೆ ನಮ್ಮ ಉದ್ದೇಶ ಎಂದು ಪ್ರಧಾನಿ ಸಾರಿದರು. 
 
ನಮ್ಮ ದೇಶದಲ್ಲಿ ಹಲವು ಸಮಸ್ಯೆಗಳಿವೆ. ಆದರೆ ಸಮಸ್ಯೆಗಳಿಗಿಂತಲೂ ನಮ್ಮಲ್ಲಿ ಸಾಮರ್ಥ್ಯ ಹೆಚ್ಚಿದೆ. ಸಾಮಾನ್ಯರ ಜೀವನ ಶೈಲಿ ಬದಲಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. ಡಿಜಿಟಲ್ ಇಂಡಿಯಾ ನಮ್ಮ ಗುರಿಯಾಗಿದೆ ಎಂದರು.
 
ಯುಪಿಎ ಸರ್ಕಾರದ ಆಧಾರ ಯೋಜನೆ ಮುಂದುವರಿಸಿದ್ದೇವೆ.. ಅಭಿವೃದ್ಧಿ ಯೋಜನೆಗಳಿಗೆ ಆಧಾರ ಲಿಂಕ್ಉ ಪಯೋಗವಾಗುತ್ತದೆ. ಆಧಾರ್ ಲಿಂಕ್ ಮಾಡಿರುವುದು ಸುಲಭವಾಗುತ್ತಿದೆ. ಆಧಾರ್‌ನಿಂದ ದೇಶದ 70 ಕೋಟಿ ಜನರಿಗೆ ಯೋಜನೆಯ ಅನುಕೂಲವಾಗಲಿದೆ ಎಂದು ಅಭಿಪ್ರಾಯ ಪಟ್ಟರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ವೆಬ್ದುನಿಯಾವನ್ನು ಓದಿ