ಪಾಕ್‌ನಲ್ಲೂ ಗೋಚರಿಸಲಿದೆ ನಮ್ಮ ತ್ರಿವರ್ಣ ಧ್ವಜದ ಹಾರಾಟ

ಸೋಮವಾರ, 6 ಮಾರ್ಚ್ 2017 (15:40 IST)
ಪಂಜಾಬಿನ ಅಟ್ಟಾರಿ-ವಾಘಾ ಗಡಿಯಲ್ಲಿ ಭಾನುವಾರ ದೇಶದ ಅತೀ ಎತ್ತರದ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಲಾಗಿದ್ದು, ಇದು ಪಕ್ಕದ ಪಾಕಿಸ್ತಾನದ ಲಾಹೋರ್‌ನಲ್ಲೂ ಸಹ ಗೋಚರಿಸಲಿದೆ.

360 ಅಡಿ ಎತ್ತರದ ಈ ಧ್ವಜ ಸ್ತಂಭದ ಮೇಲೆ ಹಾರಾಡುತ್ತಿರುವ ನಮ್ಮ ಹೆಮ್ಮೆಯ ಧ್ವಜ 120 ಅಡಿ ಉದ್ದ ಮತ್ತು 55ಟನ್ ತೂಕವಿದೆ.
 
3.50ಕೋಟಿ ರೂಪಾಯಿ ವೆಚ್ಚ ಮಾಡಿ ಪಂಜಾಬ್ ಸರ್ಕಾರ ಈ ಧ್ವಜವನ್ನು ನಿರ್ಮಿಸಿದೆ.ನಿನ್ನೆ ಪಂಜಾಬ್‌ನ ಸಚಿವ, ಬಿಜೆಪಿ ಹಿರಿಯ ನಾಯಕ ಅನಿಲ್ ಜೋಶಿ ಧ್ವಜವನ್ನು ಅನಾವರಣಗೊಳಿಸಿದರು.
 
ಈ ಬೃಹತ್ ಧ್ವಜ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತ ಪಡಿಸಿರುವ ಪಾಕ್ ಬೇಹುಗಾರಿಕೆ ಉದ್ದೇಶದಿಂದ ಧ್ವಜವನ್ನು ನೆಡಲಾಗಿದೆ ಎಂದಿದೆ. ಅದಕ್ಕೆ ಭಾರತ ಅಂತರಾಷ್ಟ್ರೀಯ ಗಡಿಯಿಂದ 200ಮೀಟರ್ ಒಳಗಡೆ ಧ್ವಜಸ್ತಂಭವನ್ನು ಸ್ಥಾಪಿಸಲಾಗಿದ್ದು, ಇದರಿಂದ ಯಾವುದೇ ನಿಯಮಗಳ ಉಲ್ಲಂಘನೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
 
ಜಾರ್ಖಂಡ್ ನ ರಾಂಚಿಯಲ್ಲಿರುವ 293 ಅಡಿ ಎತ್ತರದ ತ್ರಿವರ್ಣ ಧ್ವಜ ಇಲ್ಲಿವರೆಗೆ ದೇಶದ ಅತೀ ಎತ್ತರದ ರಾಷ್ಟ್ರಧ್ವಜ ಎನಿಸಿಕೊಂಡಿತ್ತು. 
 

ವೆಬ್ದುನಿಯಾವನ್ನು ಓದಿ