ರಕ್ಷಣಾ ಕ್ಷೇತ್ರದಲ್ಲಿ ಅಭೂತ ಪೂರ್ವ ಒಪ್ಪಂದಕ್ಕೆ ಭಾರತ-ಅಮೆರಿಕ ಸಹಿ

ಸೋಮವಾರ, 26 ಜನವರಿ 2015 (12:23 IST)
ರಕ್ಷಣಾ ಕ್ಷೇತ್ರದಲ್ಲಿ ಅಭೂತ ಪೂರ್ವ ಒಪ್ಪಂದಕ್ಕೆ ಕೊನೆಗೂ ಸಹಿ ಬಿದ್ದಿದೆ. ಮುಂದಿನ 10 ವರ್ಷಗಳ ರಕ್ಷಣಾ ಸಹಕಾರ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಒಪ್ಪಿಕೊಂಡಿದೆ.
 
ಈ ಮೂಲಕ ರಾವೆನ್ ಡ್ರೋಣ್ ತಯಾರಿಸುವ ಬೆಂಗಳೂರಿನ ಕನಸು ನನಸಾದಂತಾಗಿದೆ. ಮುಂದಿನ ತಲೆಮಾರಿನ ರಾವೆನ್ ಮಿನಿ ಯುಎವಿಗಳು ಮತ್ತು ಸಿ-130 ಸೇನಾ ಸಾರಿಗೆ ವಿಮಾನಕ್ಕೆ ವಿಶೇಷ ಕಿಟ್‍ಗಳನ್ನು ಉತ್ಪಾದಿಸುವ ಮತ್ತು ಅಬಿsವೃದಿಟಛಿಪಡಿಸುವ 4 ಪ್ರಮುಖ ಯೋಜನೆಗಳಿಗೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ. ಜೆಟ್ ಎಂಜಿನ್ ತಂತ್ರಜ್ಞಾನದ ವಿನ್ಯಾಸ ಮತ್ತು ಅಭಿವೃದ್ಧಿಯ ಜೊತೆಗೆ ವಿಮಾನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಕಾರ್ಯಕಾರಿ ತಂಡವೊಂದನ್ನು ರಚಿಸಲೂ ಒಪ್ಪಿಗೆ ನೀಡಲಾಗಿದೆ.
 
ಹೈದರಾಬಾದ್ ಹೌಸ್‍ನಲ್ಲಿ ನಡೆದ ಮಾತುಕತೆ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾವಿಂದು ರಕ್ಷಣಾ ಸಹಕಾರವನ್ನು ಹೊಸ ಮಟ್ಟಕ್ಕೇರಿಸಿದ್ದೇವೆ. ಸುಧಾರಿತ ರಕ್ಷಣಾ ಯೋಜನೆಗಳ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ಎರಡೂ ರಾಷ್ಟ್ರಗಳು ಜಂಟಿಯಾಗಿ ನಡೆಸಲಿವೆ. ಇದು ದೇಶೀಯ ರಕ್ಷಣಾ, ಉತ್ಪಾದನಾ ಕ್ಷೇತ್ರವನ್ನು ಮೇಲ್ದರ್ಜೆಗೇರಿ ಸಲು ನೆರವಾಗಲಿದೆ ಎಂದರು.
 
ಮೂಲಗಳ ಪ್ರಕಾರ, ಈ ಯೋಜನೆಯಂತೆ ಡ್ರೋಣ್ ತಯಾರಿಸುವ ಅವಕಾಶ ಬೆಂಗಳೂರಿಗೆ ಲಭ್ಯವಾಗಲಿದೆ.
 

ವೆಬ್ದುನಿಯಾವನ್ನು ಓದಿ