`2030ರ ಹೊತ್ತಿಗೆ ಭಾರತಕ್ಕೆ ಅಗತ್ಯವಿರುವ ಸಂಪೂರ್ಣ ಎನರ್ಜಿ ಚಂದ್ರನಿಂದ ಸಿಗಲಿದೆ’

ಭಾನುವಾರ, 19 ಫೆಬ್ರವರಿ 2017 (11:42 IST)
2030ರ ಹೊತ್ತಿಗೆ ಭಾರತಕ್ಕೆ ಅಗತ್ಯವಿರುವ ಸಂಪೂರ್ಣ ಇಂಧನ ಚಂದ್ರನಲ್ಲಿ ಲಭ್ಯವಿರುವ ಸಂಪನ್ಮೂಲವನ್ನ ಬಳಸಿಕೊಂಡು ಉತ್ಪಾದಿಸಬಹುದಾಗಿದೆ ಎಂದು ಇಸ್ರೋ ವಿಜ್ಞಾನಿ ಶಿವತಾನು ಪಿಳ್ಳೈ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.


ಹೀಲಿಯಂ-3 ಗಣಿಗಾರಿಕೆ ಮೂಲಕ ಅಗತ್ಯವಿರುವ ಎನರ್ಜಿ ಉತ್ಪಾದಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಸೌರವ್ಯೂಹದ ಗ್ರಹಗಳಲ್ಲಿ ಎತ್ತೇಚ್ಚವಾಗಿರುವ ಹೀಲಿಯಂ-3 ಗಣಿಗಾರಿಕೆ ಇಸ್ರೋದ ಪ್ರಮುಖ ಯೋಜನೆಯಾಗಿದ್ದು, 2030ರ ವೇಳೆಗೆ ಗುರಿ ಮುಟ್ಟಲಿದ್ದೇವೆ ಎಂದು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವತಾನು ಹೇಳಿದ್ದಾರೆ.

ಇನ್ನೂ, ಕೆಲ ದಶಕಗಳಲ್ಲಿ ಜನರು ಹನಿಮೂನ್`ಗೆ ಮೂನ್`ಗೆ ತೆರಳಿದ್ದಾರೆ ಎಂದು ಪಿಳ್ಳೈ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ