ಮಾತುಕತೆಗೆ ಭಾರತ ಎಂದಿಗೂ ಅವಕಾಶ ನೀಡಿಲ್ಲ: ಪಾಕಿಸ್ತಾನ

ಸೋಮವಾರ, 6 ಜೂನ್ 2016 (16:56 IST)
ದ್ವಿಪಕ್ಷೀಯ ಮಾತುಕತೆಗೆ ಭಾರತ ಎಂದಿಗೂ ಅವಕಾಶದ ಬಾಗಿಲನ್ನು ತೆರೆದಿಲ್ಲ ಎಂದು ಪಾಕಿಸ್ತಾನ ಆರೋಪಿಸಿದೆ. 
 
ಭಯೋತ್ಪಾದನೆಯನ್ನು ಕೊನೆಗಾಣಿಸಿ-  ಇದೊಂದೇ ಸಮಸ್ಯೆಯನ್ನು ಭಾರತ ಮುಂದಿಡುತ್ತದೆ. ಜಗತ್ತಿನ ಯಾವ ದೇಶ ಭಯೋತ್ಪಾದನೆಯನ್ನು ಕೊನೆಗೊಣಿಸಿದೆ ಎಂದು ಪಾಕ್ ಪ್ರಧಾನ ಮಂತ್ರಿಯ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಪ್ರಶ್ನಿಸಿದ್ದಾರೆ. 
 
ಭಾರತ ಸಮಗ್ರ ಮಾತುಕತೆ ಬದಲಿಗೆ ನಿರ್ದಿಷ್ಟ ಸಮಸ್ಯೆಗೆ ಅಂಟಿಕೊಂಡಿದೆ. ಕಾಶ್ಮೀರ, ಭಯೋತ್ಪಾದನೆ ಸೇರಿದಂತೆ ಎಲ್ಲಾ ಸಮಸ್ಯೆಗಳು ಮಾತುಕತೆಯಲ್ಲಿ ಚರ್ಚೆಯಾಗಬೇಕು ಎಂದು ಅವರು ಹೇಳಿದ್ದಾರೆ. 
 
ಪಾಕಿಸ್ತಾನದೊಂದಿಗೆ "ಸೌಹಾರ್ದಯುತ ಸಂಬಂಧ ಮತ್ತು ದ್ವಿಪಕ್ಷೀಯ ಮಾತುಕತೆಗೆ ಪ್ರಧಾನಿ ಮೋದಿ ಎಲ್ಲ ದಾರಿಗಳನ್ನು ತೆರೆದಿದ್ದಾರೆ. ಆದರೆ. ಇಸ್ಲಾಮಾಬಾದ್ ಕಡೆಯಿಂದ ಪ್ರಾಮಾಣಿಕತೆ ಕೊರತೆ ಕಂಡುಬಂದಿದೆ ಎಂದು ಭಾರತದ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಹೇಳಿಕೆ ನೀಡಿದ ಬೆನ್ನಲ್ಲೇ ಅಜೀಜ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ