ದೇಶದ 20 ಸ್ಮಾರ್ಟ್ ಸಿಟಿಗಳ ಪಟ್ಟಿ ಬಿಡುಗಡೆಗೊಳಿಸಿದ ಮೋದಿ ಸರಕಾರ

ಗುರುವಾರ, 28 ಜನವರಿ 2016 (17:31 IST)
ಕೇಂದ್ರ ಸರಕಾರ ದೇಶದಲ್ಲಿ ನಗರಗಳನ್ನು ಮೊದಲ 20 ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸುವ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.
 
ಸ್ಮಾರ್ಟ್ ಸಿಟಿ ಪಟ್ಟಿಯ ಸ್ಪರ್ಧೆಯಲ್ಲಿ 97 ನಗರಗಳಿದ್ದವು ಎಂದು ಮೂಲಗಳು ತಿಳಿಸಿವೆ.
 
ಭುವನೇಶ್ವರ್, ಪುಣೆ, ಜೈಪುರ್, ಸೂರತ್, ಕೋಚ್ಚಿ, ಅಹ್ಮದಾಬಾದ್, ಜಬಲ್‌ಪುರ್, ವಿಶಾಖಪಟ್ಟಣಂ, ಸೋಲಾಪುರ್, ದಾವಣಗೆರೆ, ಇಂದೋರ್, ನವದೆಹಲಿ, ಕೊಯಿಮೂತ್ತೂರ್, ಕಾಕಿನಾಡಾ, ಬೆಳಗಾವಿ, ಉದಯ್‌ಪುರ್, ಗುವಾಹಟಿ, ಚೆನ್ನೈ, ಲೂಧಿಯಾನಾ, ಭೋಪಾಲ್ 20 ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
 
ಸ್ಮಾರ್ಟ್ ಸಿಟಿ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿದ ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ಎಂ.ವೆಂಕಯ್ಯನಾಯ್ಡು, ಐದು ವರ್ಷಗಳ ಅವಧಿಯಲ್ಲಿ ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕಾಗಿ 50,802 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
 
ಸ್ಮಾರ್ಟ್ ಸಿಟಿಗಳನ್ನು ಮೂಲಸೌಕರ್ಯ, ನೀರು, ವಿದ್ಯುತ್ ಸರಬರಾಜು, ನೈರ್ಮಲ್ಯ, ಸಾರಿಗೆ ವ್ಯವಸ್ಥೆ, ಇ-ಅಡಳಿತ ಮತ್ತು ನಾಗರಿಕರ ಸಹಭಾಗಿತ್ವವನ್ನು ಅಭಿವೃದ್ಧಿಪಡಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
 
ಮುಂದಿನ ವರ್ಷದಲ್ಲಿ ಮತ್ತೆ 40 ಸ್ಮಾರ್ಟ್ ಸಿಟಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದ್ದು, ಪ್ರಧಾನಿ ಮೋದಿಯವರ 100 ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ಎಂ.ವೆಂಕಯ್ಯನಾಯ್ಡು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ