ಭಾರತದ ಅತಿ ದೊಡ್ಡ ಲೂಸರ್ : 158 ಬಾರಿ ಸ್ಪರ್ಧಿಸಿದರೂ ಗೆಲ್ಲಲಿಲ್ಲ ಈತ

ಬುಧವಾರ, 30 ಏಪ್ರಿಲ್ 2014 (20:02 IST)
158 ಬಾರಿ ಚುನಾವಣೆಯನ್ನೆದುರಿಸಿ ಪ್ರತಿ ಬಾರಿ ಸೋಲುವುದರ ಮೂಲಕ ತಮಿಳುನಾಡಿನ ನಿವಾಸಿಯೊಬ್ಬರು ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ ಎಂದು ವರದಿಯಾಗಿದೆ. 
 
158 ಬಾರಿ ಚುನಾವಣೆಯಲ್ಲಿ  ಸ್ಪರ್ಧಿಸಿ ಪ್ರತಿ ಬಾರಿ ಸೋತರೂ ಸೋಲಿನಲ್ಲೂ ಸಹ ಸಂಭ್ರಮಿಸುವ, ವೃತ್ತಿಯಲ್ಲಿ ಅಂಗಡಿ ಮಾಲೀಕರಾಗಿರುವ ಕೆ ಪದ್ಮರಾಜನ್ ತಾನು ಸೋತಿದ್ದೇನೆ ಎಂದು ಅಂದುಕೊಳ್ಳುವುದೇ ಇಲ್ಲವಂತೆ!
 
"1988ರಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಲು ಪ್ರಾರಂಭಿಸಿದ ಟೈರ್ ದುರಸ್ತಿಗಾರನಾದ ನನ್ನ ಮಹತ್ವಾಕಾಂಕ್ಷೆಗಳನ್ನು ನೋಡಿ ಜನರು ನಗುತ್ತಿದ್ದರು. ಆದರೆ ಅದರಿಂದ ನಾನು ಧೃತಿಗೆಡಲಿಲ್ಲ". 
 
"ಬದಲಾಗಿ ಸೈಕಲ್ ಪಂಕ್ಚರ್ ದುರಸ್ತಿ ಅಂಗಡಿ ಮಾಲೀಕನಾಗಿರುವ, ಸಾಮಾನ್ಯ ವನಮಾನ ಗಳಿಸುವ, ಸಮಾಜದಲ್ಲಿ ವಿಶೇಷ ಸ್ಥಾನಮಾನ ಹೊಂದಿರದ ಸಾಮಾನ್ಯ ಮನುಷ್ಯನಾದ ನಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ನನಗೆ ಅನ್ನಿಸಿತು" ಎಂದು ಅವರು ತಿಳಿಸಿದ್ದಾರೆ. 
 
ತಮ್ಮ ಮಹಾತ್ವಾಕಾಂಕ್ಷೆಯನ್ನು ತಡೆಯದ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಸೋತು ಹೋದರು. ಹತಾಶರಾಗದ ಅವರು ಸ್ಥಳೀಯ ವಿಧಾನಸಭೆ ಮತ್ತು ಲೋಕಸಭೆಗೆ ಪದೇ ಪದೇ ಆಖಾಡಕ್ಕಿಳಿದರು. ಪ್ರಧಾನಿ ವಾಜಪೇಯಿ, ಮನಮೋಹನ್ ಸಿಂಗ್‌ರಂತಹ ಮಹಾನ್ ದಿಗ್ಗಜರ ಜತೆಗೂ ಕೂಡ ಅವರು ಪೈಪೋಟಿಗಿಳಿದಿದ್ದರು. 
 
ಈ ಬಾರಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿದಿದ್ದಾರೆ. 
 
"ನಾನು ಯಾವಾಗಲೂ ನ್ಯೂಸ್ ಮೇಕರ್ಸ್ ವಿರುದ್ಧ ಸ್ಪರ್ಧಿಸುವುದನ್ನು ಆಯ್ಕೆ ಮಾಡುತ್ತೇನೆ. ಪ್ರಸ್ತುತ ನರೇಂದ್ರ ಮೋದಿ ಎಲ್ಲರಿಗಿಂತ ಹೆಚ್ಚಿನ ಜನಪ್ರಿಯತೆ ಪಡೆದ ಅಭ್ಯರ್ಥಿಯಾಗಿದ್ದಾರೆ" ಎಂದು  ಪದ್ಮರಾಜನ್ ದೂರವಾಣಿ ಮೂಲಕ ವಿವರಿಸಿದರು.
 
"ನಾನು ಗೆಲ್ಲುವುದಕ್ಕಾಗಿ ಸ್ಪರ್ಧಿಸುವುದಿಲ್ಲ ಮತ್ತು ಫಲಿತಾಂಶಗಳ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಟೈರ್ ಅಂಗಡಿ, ಮತ್ತು ಇತರ ವ್ಯವಹಾರಗಳು ಲಾಭ ತಂದು ಕೊಡುತ್ತಿವೆ" ಎಂದು ಉದ್ಯಮಿ ನಗುತ್ತಾರೆ. 

ವೆಬ್ದುನಿಯಾವನ್ನು ಓದಿ