ಮೋದಿ ಪ್ರಧಾನಿಯಾದ ಬಳಿಕ ಭಾರತದ ಜಾಗತಿಕ ಸ್ಥಾನಮಾನದಲ್ಲಿ ಏರಿಕೆ

ಶನಿವಾರ, 30 ಜನವರಿ 2016 (16:23 IST)
ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನಮಾನ ಹೆಚ್ಚಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಭಿಪ್ರಾಯಪಟ್ಟಿದ್ದಾರೆ.

ಎರಡು ದಿನಗಳ ಪ್ರವಾಸಕ್ಕೆಂದು ಮುಂಬೈಗೆ ಆಗಮಿಸಿರುವ ವಿದೇಶಾಂಗ ಸಚಿವೆ, ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಎತ್ತಿ ಹಿಡಿಯುತ್ತ, ಮೋದಿ ಅವರು ಪ್ರಧಾನಿಯಾದ ಬಳಿಕ ಯೋಗಕ್ಕೆ ಅಂತರಾಷ್ಟ್ರೀಯ ಮಟ್ಟದ ಮನ್ನಣೆ ದೊರಕುವಂತೆ ಮಾಡಿದ್ದಲ್ಲದೆ ಸ್ಥಾಯಿ ಸಮಿತಿ ರಾಷ್ಟ್ರಗಳ ನಡುವೆ  ಭಾರತದ ಸ್ಥಾನ ಹೆಚ್ಚಿದೆ ಎಂದು ಹೇಳಿದ್ದಾರೆ.
 
ತಮ್ಮ ಎರಡು ದಿನಗಳ ಭೇಟಿಯಲ್ಲಿ ಸಮಾಜದ ವಿವಿಧ ಸ್ತರಶ್ರೇಣಿಗಳ ಜನರನ್ನು ಭೇಟಿಯಾದರು ಮತ್ತು ತಮ್ಮ ಪಕ್ಷದ ಕಾರ್ಯಕರ್ತರ ಜತೆ ಸಹ ಮಾತುಕತೆ ನಡೆಸಿದರು. ಶಿಕ್ಷಣ ಸಂಸ್ಥೆ, ಸಣ್ಣ ಕೈಗಾರಿಕೆ, ಮಹಿಳಾ ಸ್ವಸಹಾಯ ಸಂಘಗಳ 20 ಪ್ರತಿನಿಧಿಗಳ ಜತೆ ಅವರು ಚರ್ಚೆ ನಡೆಸಿದರು. 
 
ಜನಧನ್ ಯೋಜನೆಯಂತಹ ಜನಪ್ರಿಯ ಕಾರ್ಯಕ್ರಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟವು ಮತ್ತು ಭಾರತಕ್ಕೆ ಅಪಾರ ಗೌರವವನ್ನು ತಂದುಕೊಟ್ಟವು ಎಂದು ಮಾತುಕತೆ ಸಂದರ್ಭದಲ್ಲಿ ಅವರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ