ಪರಮಾಣು ಸಾಮರ್ಥ್ಯದ ಪ್ರಥ್ವಿ-2 ಕ್ಷಿಪಣಿ ಯಶಸ್ವಿಯಾಗಿ ಉಡಾಯಿಸಿದ ಭಾರತ

ಗುರುವಾರ, 26 ನವೆಂಬರ್ 2015 (18:27 IST)
ಪರಮಾಣು ಅಸ್ತ್ರಗಳನ್ನು ಹೊತ್ತು 350 ಕಿ.ಮೀ ದೂರವನ್ನು ನಿಖರವಾಗಿ ತಲುಪಬಲ್ಲ ಪ್ರಥ್ವಿ-2 ಕ್ಷಿಪಣಿಯನ್ನು ಭಾರತ ಭಾರತ ಇಂದು ಯಶಸ್ವಿಯಾಗಿ ಉಡಾವಣೆಗೊಳಿಸಿದೆ.
 
ಓರಿಸ್ಸಾದ ಚಂಡೀಪುರದ ಬಾಲಾಸೋರ್‌ನಲ್ಲಿ ಇಂದು ಮಧ್ಯಾಹ್ನ 12.10 ಗಂಟೆಗೆ ಕ್ಷಿಪಣಿಯನ್ನು ಇಂಟಿಗ್ರೇಟೆಡ್ ಟೆಸ್ಟ್ ರೇಜ್ ಮೂಲಕ ಉಡಾಯಿಸಲಾಯಿತು ಎಂದು ಸೇನಾ ಮೂಲಗಳು ತಿಳಿಸಿವೆ.
 
ನೆಲದಿಂದ -ನೆಲಕ್ಕೆ ಹಾರುವ ಪ್ರಥ್ವಿ -2 ಕ್ಷಿಪಣಿ, ಎರಡು ಇಂಜಿನ್‌ಗಳನ್ನು ಹೊಂದಿದ್ದು 500 ಕೆಜಿಯಿಂದ 1 ಸಾವಿರ ಕೆಜಿ ಪರಮಾಣು ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. 
 
ಎಸ್‌ಎಫ್‌ಸಿ ಮತ್ತು ಡಿಆರ್‌ಡಿಓ ವಿಜ್ಞಾನಿಗಳ ಮೇಲ್ವಿಚಾರಣೆಯಲ್ಲಿ ನಿರ್ಮಿಸಲಾದ ಪ್ರುಥ್ವಿ-2 ಅತ್ಯಾಧುನಿಕವಾದ ಕ್ಷಿಪಣಿಯಾಗಿದೆ ಎಂದು ರಕ್ಷಣಾ ವಿಭಾಗದ ವಿಜ್ಞಾನಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ