ಜನಸಂಖ್ಯೆ: ಚೀನಾವನ್ನು ಹಿಂದಿಕ್ಕಲಿದೆ ಭಾರತ

ಶುಕ್ರವಾರ, 31 ಜುಲೈ 2015 (09:10 IST)
ಕೆಲ ವರ್ಷಗಳಲ್ಲಿ ಭಾರತ ಜನಸಂಖ್ಯೆಯಲ್ಲಿ ಚೀನಾವನ್ನು ಸಹ ಹಿಂದಿಕ್ಕಲಿದೆ. 2002ರ ಸುಮಾರಿಗೆ ಭಾರತ ಜಗತ್ತಿನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದೇಶ ಎನ್ನಿಸಲಿದೆ.
ಜತೆಗೆ ನೈಜಿರಿಯಾ 2015ರ ವೇಳೆಗೆ  ಯುಎಸ್‌ನ್ನು ಹಿಂದಿಕ್ಕಿ ಮೂರನೆಯ ಸ್ಥಾನವನ್ನು ಪಡೆದುಕೊಳ್ಳಲಿದೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ. 
 
 
ವಿಶ್ವಸಂಸ್ಥೆ ನಡೆಸಿದ 2015 ಜನಸಂಖ್ಯಾ ಪರಿಷ್ಕರಣೆ ಅಧ್ಯಯನದಲ್ಲಿ ಈ ಫಲಿತಾಂಶ ಲಭ್ಯವಾಗಿದೆ.
 
ಪ್ರಸ್ತುತ ಭಾರತದ ಜನಸಂಖ್ಯೆ 131 ಕೋಟಿ ಮತ್ತು ಚೀನಾದ್ದು 138 ಕೋಟಿ. 
 
ಚೀನಾದಲ್ಲಿ ಜನಸಂಖ್ಯೆಯ ನಿಯಂತ್ರಣಕ್ಕೆ ಕಠಿಣ ಕಾನೂನ್ನು ಜಾರಿಗೊಳಿಸಲಾಗಿದೆ. ಆದರೆ ಭಾರತದಲ್ಲಿ ಕಳೆದ ಕೆಲವು ದಶಕಗಳಿಂದ ಜನಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದ್ದು 2030ರ ವೇಳೆಗೆ ಇದು 150 ಕೋಟಿ ದಾಟಲಿದೆ ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ