ಭಾರತೀಯ ನೋಟುಗಳ ಮೇಲೆ ಅಬ್ದುಲ್ ಕಲಾಂ ಭಾವಚಿತ್ರಕ್ಕೆ ಒತ್ತಾಯ

ಶನಿವಾರ, 1 ಆಗಸ್ಟ್ 2015 (14:31 IST)
ಪೀಪಲ್ಸ್ ಪ್ರೆಸಿಡೆಂಟ್ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ದೇಶಿಯ ನೋಟುಗಳು ಮೇಲೆ ಕಲಾಂ ಭಾವಚಿತ್ರ ಹಾಕಬೇಕು ಎನ್ನುವ ಒತ್ತಡ ಜನರಿಂದ ಕೇಳಿಬರುತ್ತಿದೆ. ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಮಿಸೈಲ್ ಮ್ಯಾನ್‌ ಭಾವಚಿತ್ರವಿರುವ ನೋಟುಗಳು ಮಿಂಚಲಾರಂಭಿಸಿವೆ.
 
ಪ್ರಸ್ತುತ ಮಹಾತ್ಮಾ ಗಾಂಧಿಯವರ ಭಾವಚಿತ್ರಗಳಿರುವ ನೋಟು ಚಲಾವಣೆಯಲ್ಲಿದ್ದು, ಇದೀಗ ಕಲಾಂ ಭಾವಚಿತ್ರವನ್ನು ನೋಟುಗಳ ಮೇಲೆ ಮುದ್ರಿಸುವಂತೆ ಕೇಂದ್ರ ಸರಕಾರದ ಮೇಲೆ ಜನತೆ ಒತ್ತಡ ಹೇರುತ್ತಿದ್ದಾರೆ.
 
ಅಬ್ದುಲ್ ಕಲಾಂ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿ ಉಪಸ್ಥಿತರಿದ್ದು ಮೌನವಾಗಿ ಕೈಕಟ್ಟಿ ಅಂತಿಮ ನಮನ ಸಲ್ಲಿಸಿದ್ದಾರೆ.
 
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಜುಲೈ 27 ರಂದು ಶಿಲ್ಲಾಂಗ್‌ನಲ್ಲಿರುವ ಐಐಎಂನಲ್ಲಿ ಉಪನ್ಯಾಸ ನೀಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು.  
 
ಮಾಜಿ ಪ್ರಧಾನಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರದಲ್ಲಿದ್ದಾಗ ಪೋಕ್ರಾನ್ ಪರಮಾಣು ಪರೀಕ್ಷೆ ನಡೆಸುವಲ್ಲಿ ಕಲಾಂ ಮಹತ್ತರ ಪಾತ್ರ ನಿರ್ವಹಿಸಿದ್ದರು. ಭಾರತ- ರಷ್ಯಾದ ಜಂಟಿ ಯೋಜನೆಯ ಅಂಗವಾದ ಕೂಡನ್‌ಕೂಲಂ ನ್ಯೂಕ್ಲಿಯರ್ ಪವರ್ ಪ್ರೊಜೆಕ್ಟ್ ಕೂಡಾ ಕಲಾಂ ಕನಸಿನ ಕೂಸಾಗಿತ್ತು.  
 
ಭಾರತದ ವಿಜ್ಞಾನಿ ಸಮುದಾಯಕ್ಕೆ ನಾಗರಿಕರಿಗೆ ,ವಿಶೇವಾಗಿ ಯುವಕರಿಗೆ, ಮಕ್ಕಳಿಗೆ ಕಲಾಂ ಸ್ಪೂರ್ತಿದಾಯಕವಾಗಿದ್ದರು. 
 

ವೆಬ್ದುನಿಯಾವನ್ನು ಓದಿ