ಪ್ರಾಣಾಪಾಯವನ್ನು ಲೆಕ್ಕಿಸದೇ ಪಾಕ್ ಧ್ವಜ ಕಿತ್ತು ಭಾರತದ ಧ್ವಜ ನೆಟ್ಟ ಯೋಧ(ವಿಡಿಯೋ)

ಮಂಗಳವಾರ, 16 ಆಗಸ್ಟ್ 2016 (09:45 IST)
ಪ್ರಾಣಾಪಾಯವನ್ನು ಲೆಕ್ಕಿಸದೆ ಯೋಧನೊಬ್ಬ ಪಾಕ್ ಧ್ವಜವನ್ನು ಕಿತ್ತೆಸೆದು ತ್ರಿವರ್ಣ ಧ್ವಜ ಹಾರಿಸಿದ ಘಟನೆ ಗಡಿ ನಾಡು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್‌ನಲ್ಲಿ ನಡೆದಿದೆ.

ಪಾಕಿಸ್ತಾನ ಬೆಂಬಲಿತ ದುಷ್ಕರ್ಮಿಗಳು ಮೊಬೈಲ್ ಟವರ್‌ವೊಂದರ ಮೇಲೆ ಪಾಕ್ ಧ್ವಜವನ್ನು ಹಾರಿಸಿದ್ದರು. ಇದನ್ನು ಕಂಡು ಕಿಡಿಕಾರಿದ ಭಾರತೀಯ ಯೋಧ ಸೆಪೋಯ್ ಸಚಿನ್ ಕೂಡಲೇ ಟವರ್ ಹತ್ತಿ ಅದನ್ನು ಕಿತ್ತೆಸೆದು ಭಾರತದ ಧ್ವಜವನ್ನು ಹಾರಿಸಿದ್ದಾನೆ.
 
ಆತನ ಈ ದೇಶಪ್ರೇಮವನ್ನು ಕಂಡ ಯಾರೋ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. 
 
ಜೀವವನ್ನು ಒತ್ತೆಗಿಟ್ಟು ಯೋಧ ಮಾಡಿದ ಕಾರ್ಯಕ್ಕೆ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗಿದೆ.
 ಪ್ರಾಣಾಪಾಯವನ್ನು ಲೆಕ್ಕಿಸದೇ ಪಾಕ್ ಧ್ವಜ ಕಿತ್ತು ಭಾರತದ ಧ್ವಜ ನೆಟ್ಟ ಯೋಧ(ವಿಡಿಯೋ)
 

ವೆಬ್ದುನಿಯಾವನ್ನು ಓದಿ