ಭಾರತದ ಯುದ್ಧ ವಿಮಾನಗಳಲ್ಲಿ ಶೀಘ್ರದಲ್ಲೇ ಮಹಿಳಾ ಪೈಲಟ್‌ಗಳು

ಗುರುವಾರ, 8 ಅಕ್ಟೋಬರ್ 2015 (20:17 IST)
ನವದೆಹಲಿ: ಭಾರತೀಯ ಫೈಟರ್ ಜೆಟ್‌ಗಳಲ್ಲಿ ಮೊದಲ ಬಾರಿಗೆ ಮಹಿಳಾ ಪೈಲಟ್‌ಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ವಾಯುಪಡೆ ಮುಖ್ಯಸ್ಥ ಅರುಪ್ ರಾಹಾ ಗುರುವಾರ ಹೇಳಿದ್ದಾರೆ. 1990ರ ದಶಕದಿಂದ ಭಾರತದ ಮಹಿಳೆಯರು ವಾಯುಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಅವರಿಗೆ ಯುದ್ಧದಲ್ಲಿ ಪಾತ್ರವನ್ನು ನೀಡಲು ಅವಕಾಶವಿರಲಿಲ್ಲ. ಅವರು ವಾಯುಪಡೆಯ ಸಾರಿಗೆ ವಿಮಾನಗಳು ಮತ್ತು ಹೆಲಿಕಾಪ್ಟರುಗಳನ್ನು ನಿರ್ವಹಿಸುತ್ತಿದ್ದರು. ಆದರೆ ಫೈಟರ್ ಪೈಲಟ್‌ಗಳಾಗಿ ಆಕಾಶಕ್ಕೆ ಚಿಮ್ಮುತ್ತಿರಲಿಲ್ಲ.
 
ಯುವ ಮಹಿಳೆಯರ ಆಕಾಂಕ್ಷೆಗಳನ್ನು ಪೂರೈಸಲು ಅವರನ್ನು ಯುದ್ಧವಿಮಾನದ ಸರಣಿಯಲ್ಲಿ ಸೇರಿಸಲು ನಾವು ಯೋಜಿಸಿದ್ದೇವೆ ಎಂದು ಏರ್ ಚೀಫ್ ಮಾರ್ಷಲ್ ರಾಹಾ ತಿಳಿಸಿದ್ದಾರೆ. ಐಎಎಫ್ ಹುಟ್ಟಿನ 83ನೇ ವಾರ್ಷಿಕೋತ್ಸವದ ಜತೆ ಅವರ ಪ್ರಕಟಣೆ ಹೊಂದಿಕೆಯಾಗಿದೆ. 

ಸಮರದ ಪಾತ್ರಗಳಿಂದ ಇನ್ನೆರಡು ಸೇವೆಗಳ ಮಹಿಳಾ ಅಧಿಕಾರಿಗಳನ್ನು ದೂರವಿರಿಸಲಾಗಿತ್ತು. ನೌಕಾಪಡೆಯಲ್ಲಿ ಅವರು ಯುದ್ಧವಿಮಾನಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ ಮತ್ತು ಸೇನೆಯಲ್ಲಿ ಅವರು ಪದಾತಿ ದಳ, ಸಶಸ್ತ್ರ ದಳ ಅಥವಾ ಫಿರಂಗಿ ದಳವನ್ನು ಸೇರುವಂತಿರಲಿಲ್ಲ.
 
 

ವೆಬ್ದುನಿಯಾವನ್ನು ಓದಿ