ಭಾರತೀಯ ಮೂಲದ ಗಣಿತಜ್ಞನಿಗೆ ನೊಬೆಲ್‌ ಪ್ರಶಸ್ತಿ

ಬುಧವಾರ, 13 ಆಗಸ್ಟ್ 2014 (12:10 IST)
ಭಾರತ ಮೂಲದ ಗಣಿತ ಶಾಸ್ತ್ರಜ್ಞ ಮಂಜುಲ್‌ ಭಾರ್ಗವ ಗಣಿತ ಶಾಸ್ತ್ರದಲ್ಲಿನ ವಿಶೇಷ ಸಾಧನೆಗಾಗಿ 2014ನೇ ಸಾಲಿನ  ನೊಬೆಲ್‌ ಪ್ರಶಸ್ತಿಗೆ ಭಾಜನರಾಗಿ ತವರಿಗೆ ಕೀರ್ತಿ ತಂದಿದ್ದಾರೆ.  ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಮಂಜುಲ್‌ ಭಾರ್ಗವ ಈ ಪುರಸ್ಕಾರವನ್ನು ತೀವೃ ಪೈಪೋಟಿಯಿಲ್ಲದೇ ನಿರಾಯಾಸವಾಗಿ ತಮ್ಮದಾಗಿಸಿಕೊಂಡಿದ್ದಾರೆ. ಮಂಜುಲ್ ಆಯ್ಕೆದಾರರ ಪ್ರಥಮ ಆಯ್ಕೆಯಾಗಿದ್ದರು. 

ಒಂಟಾರಿಯೋದ ಹ್ಯಾಮಿಲ್ಟನ್‌ನಲ್ಲಿ ಜನಿಸಿದ ಮಂಜುಲ್‌ ಭಾರ್ಗವ ತಾಯಿ ಮೀರಾ ಭಾರ್ಗವ ಕೂಡ ಹೆಸರಾಂತ ಗಣಿತ ಶಾಸ್ತ್ರಜ್ಞೆಯಾಗಿದ್ದು ಹೋಫ್‌ಸ್ಟ್ರಾ ಯುನಿವರ್ಸಿಟಿಯಲ್ಲಿ ಬೋಧಕಿಯಾಗಿದ್ದಾರೆ. 
 
ಇವರ ಜತೆಗೆ ಇರಾನ್‌ ಮೂಲದ ಮಹಿಳಾ ಗಣಿತಜ್ಞೆ ಮರಿಯಂ ಮಿರ್ಜಾಖಾನಿ ಕೂಡ ಗಣಿತ ವಿಭಾಗದಲ್ಲಿ ಮೊದಲಬಾರಿಗೆ ನೊಬೆಲ್‌ ಪ್ರಶಸ್ತಿ ಗೆದ್ದ ಮಹಿಳೆ ಎಂಬ ಹೆಗ್ಗಳಿಕೆಯೊಂದಿಗೆ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಬ್ರೆಜಿಲ್‌ನ ಅರ್ಥರ್‌ ಅವಿಲಾ ಮತ್ತು ಆಸ್ಟ್ರಿಯಾದ ಮಾರ್ಟಿನ್ ಹೈರರ್‌ ಕೂಡ ಈ ವಿಭಾಗದಲ್ಲಿ ಪುರಸ್ಕೃತರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ