ರಾಜಕೀಯ ಇಚ್ಚಾಶಕ್ತಿಯಿದ್ದಲ್ಲಿ ಪ್ರತಿ ಗಂಟೆಗೆ 300 ಕಿ.ಮೀ ರೈಲು ಓಡಿಸಬಹುದು: ರಾಜಾರಾಮ್

ಮಂಗಳವಾರ, 8 ಜುಲೈ 2014 (17:14 IST)
ಭಾರತೀಯ ರೈಲ್ವೆ ಇಲಾಖೆ ತನ್ನದೇ ಇಂಜಿನಿಯರ್‌ಗಳಿಗೆ ಅವಕಾಶ ನೀಡಿದರೆ, ರೈಲುಗಳು ಪ್ರತಿ ಗಂಟೆಗೆ 300 ಕಿ.ಮೀ‌ ಓಡುವ ಸಾಮರ್ಥ್ಯ ತೋರುವಷ್ಟು ಪ್ರತಿಭಾವಂತರಿದ್ದಾರೆ. ಆದರೆ, ರೈಲ್ವೆ ಇಲಾಖೆ ಕೀಳುದರ್ಜೆಯ ವರ್ತನೆಯನ್ನು ಬಿಡಬೇಕಾಗುತ್ತದೆ ಎಂದು ಕೊಂಕಣ ರೈಲ್ವೆಯ ಪೂರ್ವ ಪ್ರಧಾನ ನಿರ್ದೇಶಕ ಬಿ ರಾಜಾರಾಮ್‌ ತಿಳಿಸಿದ್ದಾರೆ.    .
 
"  ನಮ್ಮ ಯುವ ಇಂಜಿನಿಯರ್‌‌‌ಗಳು ಸುರಕ್ಷೆ ಮತ್ತು ಸಾಮರ್ಥ್ಯದ ಜೊತೆಗೆ ವೇಗವಾಗಿ ರೈಲನ್ನು ಓಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಪ್ರತಿಭಾವಂತರಿಗೆ ಅವಕಾಶ ಕೊಡುವಂತಹ ರಾಜಕೀಯ ಇಚ್ಚಾಶಕ್ತಿಯನ್ನು ಕೇಂದ್ರ ಸರಕಾರ ತೋರಬೇಕಾಗಿದೆ ಎಂದು ರಾಜಾರಾಮ್ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ
 
ಭಾರತೀಯ ಇಂಜಿನಿಯರ್‌ಗಳು ಯೂರೋಪ್‌ ಅಥವಾ ಚೀನಾದ ನಕಲು ಮಾಡದೆ ವೇಗದ ರೈಲು ಸಿದ್ದಪಡಿಸಬಲ್ಲರು. ವೇಗದ ರೈಲಿನ ಮಾದರಿಯನ್ನು ಸಿದ್ದಪಡಿಸುವ ತಂತ್ರಜ್ಞರ ಮೇಲೆ ಸರಕಾರ ವಿಶ್ವಾಸ ತೋರಬೇಕು ಎಂದರು.
 
'2003ರಲ್ಲಿ ಮಡಗಾಂವ್‌ (ಗೋವಾ) ಮತ್ತು ರೋಹಾ(ಮುಂಬೈ ಹತ್ತಿರ)ದ ನಡುವೆ ಪ್ರತಿ ಗಂಟೆಗೆ 150 ಕಿಲೋಮೀಟರ್ ಓಡುವ  400 ಕಿಲೋಮೀಟರ್‌ ಪ್ರತಿ ಗಂಟೆಯ ವೇಗದೊಂದಿಗೆ ನಾನೇ ಟ್ರಾಯಲ್‌ ರೈಲು ಚಲಾಯಿಸಿದ್ದೆನೆ ಎಂದು ರಾಜಾರಾಮ್‌ ತಿಳಿಸಿದ್ದಾರೆ. 
 
442 ಕಿಲೋ ಮೀಟರ್‌‌ ಈ ದೂರದ ಪ್ರಯಾಣ ಕ್ರಮಿಸಲು ಸೂಪರ್‌ ಫಾಸ್ಟ್ ರೈಲಿಗೆ ಸುಮಾರು 9 ಗಂಟೆ ಬೇಕಾಗಿತ್ತು.. ಆದರೆ, ನಾನು ಓಡಿಸಿದ ವೇಗದ ರೈಲಿನಲ್ಲಿ ಕೇವಲ ಮೂರುವರೆ ಗಂಟೆಯಲ್ಲಿ ತಲುಪಿದ್ದೆ ಎಂದು ಕೊಂಕಣ ರೈಲ್ವೆಯ ಪೂರ್ವ ಪ್ರಧಾನ ನಿರ್ದೇಶಕ ಬಿ ರಾಜಾರಾಮ್‌ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ