ಇಂದಿರಾ ಗಾಂಧಿ ಹಂತಕರನ್ನು "ಪಂಜಾಬ್‌ ವಜ್ರಗಳು" ಎನ್ನುವ ಪಂಜಾಬಿ ಚಿತ್ರದ ವಿರುದ್ಧ ಭಾರಿ ಪ್ರತಿಭಟನೆ

ಮಂಗಳವಾರ, 19 ಆಗಸ್ಟ್ 2014 (16:03 IST)
ಮಾಜಿ ಪ್ರಧಾನಮಂತ್ರಿ ದಿವಂಗತ ಇಂದಿರಾ ಗಾಂಧಿ ಹಂತಕರಾದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್  ಪಂಜಾಬ್‌ನ ವಜ್ರಗಳು ಎಂದು ತೋರಿಸಿರುವ ಚಿತ್ರವನ್ನು ನಿಷೇಧಿಸುವಂತೆ ರಾಜಕೀಯ ವಲಯಗಳಿಂದ ಭಾರಿ ಪ್ರತಿಭಟನೆಯ ಕೂಗು ಎದ್ದಿದೆ 
 
ಒಂದು ವೇಳೆ ಚಿತ್ರ ಬಿಡುಗಡೆಯನ್ನು ತಡೆಯದಿದ್ದಲ್ಲಿ ಪಂಜಾಬ್‌ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದಾರೆ.  
 
ಪಂಜಾಬ್‌ನ ಅಕಾಲಿ ದಳ ಕೂಡಾ ಚಿತ್ರವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಿತ್ರಪಕ್ಷವಾದ ಬಿಜೆಪಿ ಮೇಲೆ ಒತ್ತಡ ಹೇರಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. 
 
ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮಾತನಾಡಿ,  ಚಿತ್ರವನ್ನು ಬಿಡುಗಡೆ ಮಾಡಬೇಕೋ ಅಥವಾ ಬೇಡವೋ ಎನ್ನುವುದನ್ನು ಸೆನ್ಸಾರ್ ಬೋರ್ಡ್ ನಿರ್ಧರಿಸುತ್ತದೆ. ಆದಾಗ್ಯೂ ಸರಕಾರ ಗೃಹ ಸಚಿವಾಲಯಕ್ಕೆ ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ.  
 
ಮಾಜಿ ಪ್ರದಾನಿ ದಿವಂಗತ ಇಂದಿರಾ ಗಾಂಧಿ ಅಮೃತ್‌ಸರ್‌ವ ಸ್ವರ್ಣಮಂದಿರದಲ್ಲಿ ಆಪರೇಶನ್ ಬ್ಲ್ಯೂ ಸ್ಟಾರ್‌ ನಡೆಸಲು ಅನುಮತಿ ನೀಡಿದ ನಾಲ್ಕು ತಿಂಗಳುಗಳ ನಂತರ ಅವರ ಬಾಡಿಗಾರ್ಡ್‌ಗಳಾಗಿದ್ದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್  ಅಕ್ಟೋಬರ್ 31 1984 ರಲ್ಲಿ ಇಂದಿರಾ ಅವರನ್ನು ಗುಂಡಿಟ್ಟು ಕೊಂದಿದ್ದರು.    
 
ಕೌಮ್ ದೇ ಹೀರಾ( ಸಮುದಾಯದ ವಜ್ರಗಳು) ಎನ್ನುವ ಚಿತ್ರ ಆಪರೇಶನ್ ಬ್ಲ್ಯೂ ಸ್ಟಾರ್‌ನಿಂದ ಆರಂಭವಾಗಿ ಸತ್ವಂತ್ ಸಿಂಗ್ ಗಲ್ಲಿಗೇರಿಸಿದ ನಂತರ ಅಂತ್ಯವಾಗುತ್ತದೆ. ಬಾಡಿಗಾರ್ಡ್‌ ಬಿಯಾಂತ್‌ಸಿಂಗ್‌ನನ್ನು ಮತ್ತೊಬ್ಬ ಬಾಡಿಗಾರ್ಡ್ ಗುಂಡಿಟ್ಟು ಹತ್ಯೆ ಮಾಡಿದ್ದನು.  
 
ಇಂದಿರಾ ಗಾಂಧಿಯವರ ಹತ್ಯೆಯ ನಂತರ ದೇಶಾದ್ಯಂತ ಕನಿಷ್ಠ 3 ಸಾವಿರ ಸಿಖ್ಕರನ್ನು ಹತ್ಯೆ ಮಾಡಲಾಗಿತ್ತು.
 
ಕಳೆದ ತಿಂಗಳು ಅಕಾಲಿ ದಳ ಬೆಂಬಲಿತ ಶಿರೋಮಣಿ ಗುರುದ್ವಾರಾ ಪ್ರಬಂಧಕ್ ಕಮಿಟಿ ಸಭೆಯೊಂದನ್ನು ಆಯೋಜಿಸಿ ಇಂದಿರಾ ಗಾಂಧಿ ಹಂತಕರಾದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಅವರನ್ನು ಹುತಾತ್ಮರು ಎಂದು ಗೌರವಿಸಿತ್ತು.    

ವೆಬ್ದುನಿಯಾವನ್ನು ಓದಿ