ಮೇನಕಾ ರಾಜಕೀಯದಲ್ಲಿ ನೆರವಾಗಬೇಕೆಂದು ಇಂದಿರಾ ಬಯಸಿದ್ದರು: ಆದರೆ ಆಗಿದ್ದೇನು?

ಗುರುವಾರ, 12 ಮೇ 2016 (17:12 IST)
ದಿವಂಗತ ಇಂದಿರಾ ಗಾಂಧಿ ಪುತ್ರ ಸಂಜಯ್ ಮರಣದ ನಂತರ ಕಿರಿಯ ಸೊಸೆ ತಮ್ಮ ರಾಜಕೀಯದಲ್ಲಿ ನೆರವಾಗಬೇಕೆಂದು ಇಂದಿರಾ ಬಯಸಿದ್ದರು. ಆದರೆ ಮೇನಕಾ ರಾಜೀವ್‌ಗೆ ವಿರೋಧಿಯಾದ ಜನರ ಸಹವಾಸದಲ್ಲಿದ್ದರು. ಪ್ರಧಾನಮಂತ್ರಿಗೆ ಸೋನಿಯಾ ನೆಚ್ಚಿನ ಸೊಸೆಯಾಗಿದ್ದರೂ, ಸಂಜಯ್ ಗಾಂಧಿ ನಿಧನದ ನಂತರ ಮೇನಕಾ ಕಡೆ ಹೆಚ್ಚು ಒಲವನ್ನು ಇಂದಿರಾ ತೋರಿದ್ದರು..
 
ಆದಾಗ್ಯೂ ಮೇನಕಾರನ್ನು ತಮ್ಮ ಸಾಮೀಪ್ಯಕ್ಕೆ ತರಲು ಇಂದಿರಾಗೆ ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ಕೌಟುಂಬಿಕ ವ್ಯವಹಾರಗಳಲ್ಲಿ ಸೋನಿಯಾ ಮೇಲುಗೈ ಹೊಂದಿದ್ದರು. ಆದರೆ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಮೇನಕಾ ಉತ್ತಮ ರಾಜಕೀಯ ಪ್ರಜ್ಞೆ ಹೊಂದಿದ್ದರಿಂದ ಅವರ ಅಭಿಪ್ರಾಯಗಳನ್ನು ಪ್ರಧಾನಮಂತ್ರಿ ಪರಿಗಣಿಸುತ್ತಿದ್ದರು ಎಂದು ಗಾಂಧಿಯ ಖಾಸಗಿ ವೈದ್ಯ ಕೆ.ಪಿ. ಮಾಥುರ್ ಹೇಳಿದ್ದಾರೆ. 
 
ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಮಾಜಿ ವೈದ್ಯರಾಗಿದ್ದ ಮಾಥುರ್, ದಿವಂಗತ ಪ್ರಧಾನಿಗೆ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 1984ರಲ್ಲಿ ಹತ್ಯೆಯಾಗುವ ತನಕ ಮಾಥುರ್ ಪ್ರತಿ ದಿನ ಬೆಳಿಗ್ಗೆ ಪ್ರಧಾನಿಯನ್ನು ಭೇಟಿ ಮಾಡುತ್ತಿದ್ದರು. ''ದಿ ಅನ್‌ಸೀನ್ ಇಂದಿರಾ ಗಾಂಧಿ'' ಎಂಬ ಹೊಸ ಪುಸ್ತಕದಲ್ಲಿ ರಾಜಕಾರಣಿಯಾಗಿ ಇಂದಿರಾ ಗಾಂಧಿಯ ಪ್ರಯಾಣ ಮತ್ತು ಕುಟುಂಬದೊಂದಿಗೆ ಅವರ ಸಂಬಂಧಗಳನ್ನು ಮಾಥುರ್  ವಿವರಿಸಿದ್ದಾರೆ.
 
ಸಂಜಯ್ ಗಾಂಧಿ ನಿಧನರಾಗಿ ಕೆಲವೇ ವರ್ಷಗಳಲ್ಲಿ ಮೇನಕಾ ಪ್ರಧಾನ ಮಂತ್ರಿ ನಿವಾಸವನ್ನು ಕಷ್ಟದ ಸಂದರ್ಭಗಳಲ್ಲಿ ತೊರೆಯಬೇಕಾಯಿತು ಎಂದು ಮಾಥುರ್ ಪುಸ್ತಕದಲ್ಲಿ ಬರೆದಿದ್ದಾರೆ.ಮೇನಕಾ ರಾಜೀವ್‌ಗೆ ವಿರೋಧಿಯಾದ ಜನರ ಜತೆ ಬೆರೆಯುತ್ತಿದ್ದರು. ಇದು ಸಂಜಯ್ ವಿಚಾರ ಮಂಚ್ ಎಂಬ ಸಂಘಟನೆ ರಚನೆಗೆ ಕಾರಣವಾಯಿತು. ಇದು ಸಂಜಯ್ ಗಾಂಧಿ ಪರಂಪರೆಯನ್ನು ಮುಂದುವರಿಸಲು ಬಯಸಿತು ಎಂದು ಮಾಥುರ್ ಹೇಳಿದ್ದಾರೆ. 
 
ಆದರೆ ಲಕ್ನೊದಲ್ಲಿ ನಡೆದ ಸಂಜಯ್ ವಿಚಾರ ಮಂಚ್‌‌ ಸಮಾವೇಶದಲ್ಲಿ ಭಾಗವಹಿಸಿದಂತೆ ಇಂದಿರಾ ಸೂಚಿಸಿದ್ದರೂ ಮನೇಕಾ ಭಾಷಣ ಮಾಡಿದ್ದು ಭಿನ್ನಾಭಿಪ್ರಾಯಕ್ಕೆ ಎಡೆಮಾಡಿತು. 

ವೆಬ್ದುನಿಯಾವನ್ನು ಓದಿ