ಇನ್ಫೋಸಿಸ್ ಉದ್ಯೋಗಿ ಹತ್ಯೆ ಪ್ರಕರಣ: ಶಂಕಿತನ ಫೂಟೇಜ್ (ವಿಡಿಯೋ)

ಶನಿವಾರ, 25 ಜೂನ್ 2016 (16:25 IST)
ಚೆನ್ನೈನ ನುಂಗಮ್ ಬಾಕಮ್ ರೈಲು ನಿಲ್ದಾಣದಲ್ಲಿ ನಡೆದ 24 ವರ್ಷದ ಟೆಕ್ಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಇರುವ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ.

ಚೆಂಗಲ್‌ಪೇಟ್‌ನಲ್ಲಿ ಇನ್ಫೋಸಿಸ್ ಕಂಪನಿಯಲ್ಲಿ ಸಿಸ್ಟಮ್ ಎಂಜಿನಿಯರ್ ಆಗಿರುವ ಸ್ವಾತಿ 6.35ಕ್ಕೆ ರೈಲು ನಿಲ್ದಾಣಕ್ಕೆ ಬಂದಿದ್ದಳು. 
ಡಿಸೆಂಬರ್ 2014ರಿಂದ ಮರೈಮಲೈನಗರದ ಮಹಿಂದ್ರಾ ಟೆಕ್ ಪಾರ್ಕ್‌ನಲ್ಲಿರುವ ಇನ್ಫೋಸಿಸ್ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಸ್ವಾತಿ ಪ್ರತಿದಿನ 6.45ಕ್ಕೆ ರೈಲನ್ನೇರುತ್ತಿದ್ದರು. ಆಕೆಯನ್ನುಚೂಲೈಮೇಡಿನ ಸೌತ್ ಗಂಗೈಯ್ ಅಮ್ಮನ್ ಕೋಯಿಲ್ ಬೀದಿಯಲ್ಲಿರುವ ಮನೆಯಿಂದ ನಿಲ್ದಾಣದವರೆಗೆ ಆಕೆಯ ತಂದೆ ಸಂತಾನಗೋಪಾಲ ಕೃಷ್ಣನ್ ಬೈಕ್‌ನಲ್ಲಿ ತಂದು ಬಿಟ್ಟಿದ್ದರು. ಮನೆಗೂ ಮತ್ತು ನಿಲ್ದಾಣಕ್ಕೂ ಒಂದು ಕೀಮಿ ದೂರ ಸಹ ಇಲ್ಲ.
 
2ನೇ ನಂಬರ್ ಪ್ಲಾಟ್‌ಫಾರ್ಮ್‌ನಲ್ಲಿ ಲೇಡಿಸ್ ಬೋಗಿ ಬರುವ ಜಾಗದಲ್ಲಿ ನಿಂತಿದ್ದ ಸ್ವಾತಿಯ ಬಳಿ  ಚೆಕ್ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದ ಯುವಕನೊಬ್ಬ ಬಂದಿದ್ದಾನೆ. ಅವರಿಬ್ಬರ ನಡುವೆ ಎರಡು ನಿಮಿಷ ವಾಗ್ವಾದ ನಡೆದಿದ್ದು ಬಳಿಕ ಬಳಿಕ ಆತ ತನ್ನ ಬ್ಯಾಗ್‌ನಿಂದ ಹರಿತವಾದ ಚಾಕುವನ್ನು ತೆಗೆದು ಆಕೆಯ ಮುಖ ಮತ್ತು ಕುತ್ತಿಗೆಯ ಮೇಲೆ ದಾಳಿ ನಡೆಸಿದ್ದಾನೆ. ಆಕೆ ನೆಲಕ್ಕುರುಳುತ್ತಿದ್ದಂತೆ ಶಾಂತಚಿತ್ತನಾಗಿ ಆತ ಅಲ್ಲಿಂದ ತೆರಳಿದ್ದಾನೆ. 
 
ರೈಲು ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಇರಲಿಲ್ಲ. ಆದರೆ ರೈಲು ನಿಲ್ದಾಣದ ಬಳಿ ಇದ್ದ ಮನೆಯೊಂದರಿಂದ ಪಡೆಯಲಾದ ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ 30 ಆಸುಪಾಸಿನ ಯುವಕನೊಬ್ಬ ವೇಗವಾಗಿ ಹೋಗುತ್ತಿರುವ ದೃಶ್ಯಾವಳಿಗಳು ದಾಖಲಾಗಿವೆ. ಇದರ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
 
ಘಟನೆಯನ್ನು ಪ್ರತ್ಯಕ್ಷವಾಗಿ ಕಂಡ ರೈಲು ನಿಲ್ದಾಣದ ಅಂಗಡಿ ಮಾಲೀಕನೊಬ್ಬ ಈ ಘಟನೆಯ ಕುರಿತು ರೈಲು ಸಿಬ್ಬಂದಿಗೆ ಮಾಹಿತಿ ನೀಡಿ ಅವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. 
 
 ಇನ್ಫೋಸಿಸ್ ಉದ್ಯೋಗಿ ಹತ್ಯೆ ಪ್ರಕರಣ: ಶಂಕಿತನ ಫೂಟೇಜ್ (ವಿಡಿಯೋ)
 
'
ಕೃಪೆ: BBC World

ವೆಬ್ದುನಿಯಾವನ್ನು ಓದಿ