ಆತ್ಮಹತ್ಯೆಗೆ ಶರಣಾದ ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ

ಗುರುವಾರ, 18 ಫೆಬ್ರವರಿ 2016 (15:34 IST)
ಪ್ರಸ್ತುತ ಚೆನ್ನೈನಲ್ಲಿ ಸೇವೆ ಸಲ್ಲಿಸುತ್ತಿದ್ದ 2009ರ ಬ್ಯಾಚ್ ಐಪಿಎಸ್ ಅಧಿಕಾರಿ ಎನ್. ಹರೀಶ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ರಾಜ್ಯದ ಜಾಗರೂಕತೆ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯದಲ್ಲಿ ಸಹಾಯಕ ಕಮಿಷನರ್ ಆಗಿದ್ದರು. 
 
ಇವರು ಮೂಲತಃ ಕರ್ನಾಟಕದವರಾಗಿದ್ದು ಎಗ್ಮೋರ್‌ನಲ್ಲಿನ ಐಪಿಎಸ್ ಅಧಿಕಾರಿಗಳ ಮೆಸ್‌ನಲ್ಲಿ ವಾಸವಾಗಿದ್ದರು. ಇಂದು ಬೆಳಿಗ್ಗೆ 10 ಗಂಟೆಯಾದರೂ ಸಹ ಮನೆ ಬಾಗಿಲು ತೆರೆಯದಿದ್ದಾಗ ಕೆಲಸಗಾರರು ಮನೆ ಬಾಗಿಲು ಒಡೆದು ಒಳ ಹೋಗಾದ ಅವರು ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ. 
 
ಇಲಾಖೆಯಿಂದ ವಿಚಾರಣೆ ನಡೆಯುತ್ತಿದ್ದುದರಿಂದ ಅವರ ಬಡ್ತಿಗೆ ವಿಳಂಬವಾಗಿತ್ತು. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಮೂಲಗಳು ತಿಳಿಸಿವೆ, 
 
ಅವರು ತಮ್ಮ ಬ್ಯಾಚ್‌ನಲ್ಲಿ ಎಲ್ಲರಿಗಿಂತ ಕಿರಿಯರಾಗಿದ್ದು, ಬ್ಯಾಚ್‌ನ ಎಲ್ಲರೂ ಕಳೆದ ಎರಡು ವರ್ಷಗಳ ಹಿಂದೆಯೇ ಬಡ್ತಿ ಪಡೆದಿದ್ದರು. ಆದರೆ  ಡಿಜಿಪಿ ಕೆ. ರಾಮಾನುಜಮ್ ತನಿಖೆಗೆ ಆದೇಶಿಸಿದ್ದರಿಂದ ಅವರ ಬಡ್ತಿ ಮಾತ್ರ ವಿಳಂಬವಾಗಿತ್ತು. ಅವರು ಖಿನ್ನತೆ ಕಾಯಿಲೆಯಿಂದ ನರಳುತ್ತಿದ್ದರು ಎಂದು ಸಹ ವರದಿಗಳಿದ್ದು ಆ ಕುರಿತು ಪರಿಶೀಲಿಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ.
 
ಈ ಹಿಂದೆ ಅವರು ಮಧುರೈ ಸಮೀಪದ ಕಿಲಕರೈನಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. 
 

ವೆಬ್ದುನಿಯಾವನ್ನು ಓದಿ