ಶಿಸ್ತು ಕಲಿಸಲು ವಿದ್ಯಾರ್ಥಿಗಳಿಗೆ ಕೇಶಮುಂಡನ ಮಾಡಿಸಿದ ಪ್ರಾಂಶುಪಾಲ

ಮಂಗಳವಾರ, 30 ಜೂನ್ 2015 (18:57 IST)
ಆಘಾತಕಾರಿ ಘಟನೆಯೊಂದರಲ್ಲಿ 25 ವಿದ್ಯಾರ್ಥಿಗಳ ಕೇಶವಿನ್ಯಾಸದಿಂದ ಬೇಸತ್ತು ಹೋಗಿದ್ದ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಶಿಸ್ತು ಕಲಿಸಲು ಕೇಶಮುಂಡನಾ ಮಾಡಿಸಿದ ಘಟನೆ ವರದಿಯಾಗಿದೆ.
 
ಶಾಲೆಯ ಬಹುತೇಕ ವಿದ್ಯಾರ್ಥಿಗಳು ಅಗತ್ಯಕ್ಕಿಂತ ಹೆಚ್ಚಿನ ರೀತಿಯಲ್ಲಿ ಕೇಶ ವಿನ್ಯಾಸಕ್ಕೆ ಮೊರೆಹೋಗಿದ್ದರು. ಕೆಲವರು ಮಾತ್ರ ಟ್ರಿಮ್‌ ಅಗಿದ್ದರು ಎನ್ನಲಾಗಿದೆ. 
 
ಸಹಸ್ತ್ರಧಾರ ರಸ್ತೆಯಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯಲ್ಲಿ 10,11,12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರ ಕಚೇರಿಗೆ ಬರುವಂತೆ ನೋಟಿಸ್ ಜಾರಿಗೊಳಿಸಲಾಗಿತ್ತು. ಅಲ್ಲಿ ಕಟಿಂಗ್ ಮಾಡುವ ವ್ಯಕ್ತಿ ಹಾಜರಾಗಿದ್ದ ಎನ್ನಲಾಗಿದೆ. 
 
ಕೇಶಮುಂಡನ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ. ಶಾಲೆಯ ಶಿಸ್ತು ಮತ್ತು ನಿಯಮಗಳನ್ನು ರೂಢಿಸಕೊಳ್ಳಲಿ ಎನ್ನುವುದೇ ನಮ್ಮ ಬಯಕೆ ಎಂದು ಪ್ರಾಂಶುಪಾಲರು ಘೋಷಿಸಿದ್ದಾರೆ.
 
ಪ್ರಾಂಶುಪಾಲ ಬಿ.ಕೆ.ಸಿಂಗ್ ಮಾತನಾಡಿ, ಶಾಲೆಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇದೊಂದು ದಿಟ್ಟ ಹೆಜ್ಜೆ ಎಂದು ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ