ಪಕ್ಷದ ಮತಬ್ಯಾಂಕ್ ಆಗಿರುವ ತೇವರ್-ಗೌಂಡರ್ ಸಮುದಾಯದ ನಡುವಿನ ಕೊಂಡಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವ ಪಳನಿಸ್ವಾಮಿ ಅವರ ಬಗ್ಗೆ ಪಕ್ಷದಲ್ಲಿ ಉತ್ತಮ ಬೆಂಬಲವಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೆಲ್ವಂ ಹೊರತು ಪಡಿಸಿ ಅವರ ಜತೆಗಿದ್ದವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಸಂಧಾನ ಕಾರ್ಯ ಆರಂಭಿಸಿದ್ದಾರೆ. ನಾಳೆ ಬಹುಮತ ಪಡಿಸಲು ವಿಫಲವಾದರೆ ಪಳನಿ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡೇ ದಿನಗಳಲ್ಲಿ ಪತನವಾಗಲಿದೆ.