ಕ್ರಿಕೆಟ್ ಪಂದ್ಯ ನೋಡುವ ನೆಪದಲ್ಲಿ ಬಂದ 56 ಪಾಕಿಗಳೆಲ್ಲಿ?

ಭಾನುವಾರ, 23 ನವೆಂಬರ್ 2014 (11:59 IST)
2005ರಲ್ಲಿ ಭಾರತ-ಪಾಕ್ ನಡುವೆ ನಡೆದ ಕ್ರಿಕೆಟ್ ಸರಣಿಯನ್ನು ವೀಕ್ಷಿಸಲು ಭಾರತಕ್ಕೆ ಬಂದು ಸುಳಿವಿಗೆ ಸಿಗದಾಗಿರುವ 56 ಪಾಕ್ ಪ್ರಜೆಗಳು ಐಎಎಸ್ ಏಜೆಂಟರೆಂಬ ಆತಂಕಕಾರಿ ವಿಷಯವನ್ನು  ಕೇಂದ್ರ ಗೃಹ ಸಚಿವಾಲಯ ಬಹಿರಂಗ ಪಡಿಸಿದೆ. 

ಬೆಂಗಳೂರು, ಮೊಹಾಲಿ, ದೆಹಲಿ ಮತ್ತು ಕಾನ್ಪುರಗಳಲ್ಲಿ ನಡೆದ ಪಂದ್ಯ ವೀಕ್ಷಿಸಲು  ಬಂದಿದ್ದ ಈ 57 ಜನ ಮತ್ತೆ ಪಾಕಿಸ್ತಾನಕ್ಕೆ ಹಿಂತಿರುಗಿಲ್ಲ. ಕಳೆದ 9 ವರ್ಷಗಳಿಂದ ಇವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. 
 
ಬೆಂಗಳೂರಿನಲ್ಲಿ 18 ಜನ, ಮೊಹಾಲಿಯಲ್ಲಿ 11 ಮತ್ತು ದೆಹಲಿ, ಕಾನ್ಪುರಗಳಲ್ಲಿ 27 ಜನರು ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
 
ಬಹುತೇಕರು 25 ರಿಂದ 35 ವರ್ಷದೊಳಗಿನವರಾಗಿದ್ದು, ಇವರ ವೀಸಾ ಅವಧಿ 2005, ಮಾರ್ಚ್ 14 ರಂದೇ ಪೂರ್ಣಗೊಂಡಿತ್ತು ಎಂದು ಗೃಹ ಸಚಿವಾಲಯ ತಿಳಿಸಿದೆ. 
 
ಇತ್ತೀಚಿಗೆ ಬಂಧಿತರಾದ ಕೆಲ ಉಗ್ರರು ಹಾಗೂ ಐಎಸ್ಐ ಏಜೆಂಟರೆಂಬ  ಮಹತ್ವದ ಮಾಹಿತಿ ಲಭ್ಯವಾಗಿದ್ದು, ಉತ್ತರಪ್ರದೇಶದಲ್ಲಿ ಐಎಸ್ಐ  ನೆಲೆ ಸ್ಥಾಪಿಸಿರುವ ವಿಷಯ ಬೆಳಕಿಗೆ ಬಂದಿದೆ ಎಂದು ಗೃಹ ಸಚಿವಾಲಯ ಹೇಳಿದೆ
 
ಈ ಏಜಂಟರ ಬಳಿ ಚುನಾವಣಾ ಗುರುತಿನ ಪಟ್ಟಿ,  ಸ್ಥಳೀಯ ನಿವಾಸಿ ಎಂಬುದನ್ನು ದೃಢೀಕರಿಸುವ ಹಲವು ನಕಲಿ ದಾಖಲೆಗಳಿದ್ದು ಇವರನ್ನು ಪತ್ತೆ ಮಾಡುವುದು ಸುಲಭದ ಕೆಲಸವಲ್ಲ ಎಂಬುದು ಆತಂಕವನ್ನು ಮೂಡಿಸಿದೆ. ಆದರೆ ಇವರ ಪತ್ತೆಗೆ  ತೀವೃ ಶೋಧವನ್ನು ನಡೆಸಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ