ಪಠಾಣ್ ಕೋಟ್ ದಾಳಿ: ಆರ್ಮಿ ಕಂಟೋನ್ಮೆಂಟ್‌ನಲ್ಲೇ ಕೆಲಸ ಮಾಡುತ್ತಿದ್ದ ಐಎಸ್ಐ ಏಜೆಂಟ್ ಬಂಧನ

ಮಂಗಳವಾರ, 2 ಫೆಬ್ರವರಿ 2016 (12:55 IST)
ಪಠಾಣ್ ಕೋಟ್ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಯಶಸ್ಸು ದೊರಕಿದ್ದು ಪಠಾಣ್‌ಕೋಟ್ ಆರ್ಮಿ ಕಂಟೋನ್ಮೆಂಟ್‌ನಲ್ಲೇ ಕೆಲಸ ಮಾಡುತ್ತಿದ್ದ ಐಎಸ್ಐ ಪರ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಏಜೆಂಟ್‌ನೊಬ್ಬನನ್ನು ಗುಪ್ತಚರ ದಳ ಬಂಧಿಸಿದೆ. ಆತನನ್ನು ಇರ್ಶಾದ್ ಎಂದು ಗುರುತಿಸಲಾಗಿದೆ.

ಆತ ಆರ್ಮಿ ಕಂಟೋನ್ಮೆಂಟ್‌ನ ಮಮೂನ್ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಾ ಐಎಸ್ಐ ಪರ ಕೆಲಸ ಮಾಡುತ್ತಿದ್ದ. ಆತನ ಮೊಬೈಲ್‌ನಲ್ಲಿ ಪಠಾಣ್ ಕೋಟ್ ದಾಳಿ ಸಂಬಂಧ ಹಲವು ಫೋಟೋಗಳು ಪತ್ತೆಯಾಗಿವೆ.  ಈತ ಜಮ್ಮುವಿನಲ್ಲಿ ವಾಸವಾಗಿರುವ ಸಜ್ಜದ್ ಎಂಬ ಉಗ್ರನಿಗೆ ಎಲ್ಲ ಮಾಹಿತಿಗಳನ್ನು ರವಾನಿಸುತ್ತಿದ್ದ ಎಂದು ತಿಳಿದು ಬಂದಿದ್ದು ಸಜ್ಜದ್‌ನನ್ನು ಕೂಡ ಗುಪ್ತಚರ ದಳ ಬಂಧಿಸಿದೆ.
 
 ಇರ್ಶಾದ್‌ನನ್ನು ನಿಯಂತ್ರಿಸುತ್ತಿದ್ದ ಸಜ್ಜದ್ ಇರ್ಷಾದ್ ನೀಡಿದ್ದ ಎಲ್ಲ ಮಾಹಿತಿಗಳನ್ನು ಐಎಸ್ಐಗೆ ಕಳುಹಿಸುತ್ತಿದ್ದ. 
 
ಇರ್ಶಾದ್ ಬಹಿರಂಗ ಪಡಿಸಿರುವ ಮಾಹಿತಿಯ ಆಧಾರದ ಮೇಲೆ ಸಜ್ಜನ್‌ನ್ನು ವಿಚಾರಣೆಗೊಳಪಡಿಸಲಾಗಿದೆ. 
 
ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ ಉಗ್ರರಿಗೆ ನೆರವಾಗುವಲ್ಲಿ ಇರ್ಶಾದ್  ಪಾತ್ರವಿದೆಯೇ ಎಂಬ ಕುರಿತು ಗುಪ್ತಚರ ದಳದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ