ಐಸಿಸ್ ಮುಖ್ಯಸ್ಥ ಬಾಗ್ದಾದಿ ಸಾವು

ಮಂಗಳವಾರ, 28 ಏಪ್ರಿಲ್ 2015 (10:04 IST)
ಅಮೆರಿಕ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ತೀವೃವಾಗಿ ಗಾಯಗೊಂಡಿದ್ದಾನೆ ಎಂದು ಹೇಳಲಾಗಿದ್ದ ಐಸಿಸ್ ಮುಖಂಡ ಅಬು ಬಕ್ರ್ ಅಲ್ ಬಾಗ್ದಾದಿ ಮೃತಪಟ್ಟಿದ್ದಾನೆ ಎಂದು ವರದಿಯೊಂದು ತಿಳಿಸಿದೆ. 

 
ಬಾಗ್ದಾದಿ ಮೃತಪಟ್ಟಿದ್ದಾನೆ ಎಂದು ಆಲ್ ಇಂಡಿಯಾ ರೇಡಿಯೋ ಸೋಮವಾರ ಟ್ವೀಟ್ ಮಾಡಿದ್ದು, ರೇಡಿಯೋ ಇರಾನ್‌ನಿಂದ ಈ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದೆ. 
 
ಇರಾನ್ ರೇಡಿಯೋವನ್ನು ಹೊರತು ಪಡಿಸಿದರೆ ಬಾಗ್ದಾದಿ ಸಾವನ್ನಪ್ಪಿದ್ದಾನೆ ಎಂದು ಇಲ್ಲಿಯವರೆಗೆ ಇನ್ನು ಯಾವ ಮಾಧ್ಯಮದಲ್ಲಿ ಸಹ ಪ್ರಕಟವಾಗಿಲ್ಲ.
 
ಪಶ್ಚಿಮ ಇರಾಕಿನ ಪ್ರದೇಶದಲ್ಲಿ ಅಡಗಿದ್ದ ಆತ ಮಾರ್ಚ್ ತಿಂಗಳಲ್ಲಿ ಅಮೆರಿಕ ಕೈಗೊಂಡಿದ್ದ ದಾಳಿಯಲ್ಲಿ ಸಿರಿಯಾ ಗಡಿಯ ಸಮೀಪದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ರೇಡಿಯೋ ಇರಾನ್ ತಿಳಿಸಿದೆ. 
 
ಆತನ ಸಾವಿನಿಂದ ಇಸಿಸ್ ಸಂಘಟನೆಗೆ ತೀವ್ರ ನಷ್ಟವಾಗಲಿದ್ದು. ಈತನ ತಲೆಗೆ ಮೇಲೆ ಅಮೆರಿಕ 10 ಮಿಲಿಯನ್ ಡಾಲರ್ ಬಹುಮಾನ ಘೋಷಣೆ ಮಾಡಿತ್ತು.
 
ಇತ್ತೀಚಿನ ಕೆಲವು ತಿಂಗಳಲ್ಲಿ ಐಸಿಸ್‌ನ ಹಲವು ಟಾಪ್ ಕಮಾಂಡರ್ಸ್ ಸಾವನ್ನಪ್ಪಿದ್ದಾರೆ ಅಥವಾ ಗಂಭೀರವಾಗಿ ಗಾಯಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ