ಭಾರತದ ಮೇಲೆ ದಾಳಿಗೆ ಐಎಸ್‌ಐಎಸ್ ಸಂಪೂರ್ಣ ಸಿದ್ದತೆ: ಅಮೆರಿಕ

ಬುಧವಾರ, 29 ಜುಲೈ 2015 (15:15 IST)
ಅಮೆರಿಕ ದೇಶಕ್ಕೆ ಬಲವಾದ ಹೊಡೆತ ಕೊಡಲು ನಿರ್ಧರಿಸಿರುವ ಐಎಸ್‌ಐಎಸ್ ಉಗ್ರಗಾಮಿ ಸಂಘಟನೆ, ಭಾರತದ ಮೇಲೆ ದಾಳಿ ಮಾಡಲು ಸಿದ್ದತೆ ನಡೆಸಿದ್ದು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ತಾಲಿಬಾನ್‌ಗಳು ಒಂದಾಗಬೇಕು ಎಂದು ಕರೆ ನೀಡಿರುವುದಾಗಿ ಅಮೆರಿಕದ ಗುಪ್ತಚರ ದಲಗಳು ಎಚ್ಚರಿಕೆಯ ಸಂದೇಶ ರವಾನಿಸಿವೆ.
 
ಪಾಕಿಸ್ತಾನಿ ನಾಗರಿಕನೊಬ್ಬನಿಂದ 32 ಪುಟಗಳ ಉರ್ದುವಿನಲ್ಲಿ ಬರೆದ ಪುಸ್ತಕವೊಂದನ್ನು ಅಮೆರಿಕದ ಗುಪ್ತಚರ ದಳದ ಅಧಿಕಾರಿಗಳು ವಶಪಡಿಸಿಕೊಂಡಿರುವ ಬಗ್ಗೆ ಸಂಶೋದನಾತ್ಮಕ ವರದಿಯನ್ನು ಯುಎಸ್‌ಎ ಟುಡೇ ವರದಿ ಮಾಡಿದೆ.
 
ಅಮೆರಿಕದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಭಾರತದ ಮೇಲೆ ದಾಳಿ ನಡೆಸಲು ಐಸಿಎಸ್ ಉಗ್ರಗಾಮಿ ಎಲ್ಲಾ ರೀತಿಯ ಸಿದ್ದತೆ ನಡೆಸುತ್ತಿದೆ ಎಂದು ವರದಿಯಲ್ಲಿ ಬಹಿರಂಗಪಡಿಸಿದೆ. 
 
ಅಮೆರಿಕ ತನ್ನ ಎಲ್ಲಾ ಮಿತ್ರದೇಶಗಳೊಂದಿಗೆ ದಾಳಿ ಮಾಡಬಹುದಾಗಿದೆ. ಆದ್ದರಿಂದ ಅಂತಿಮ ಹೋರಾಟಕ್ಕೆ ಮುಸ್ಲಿಮರು ಸಿದ್ದರಾಗಬೇಕು ಎಂದು ಹೇಳಿಕೆ ನೀಡಿದೆ. 
 
ಭಾರತದ ಮೇಲೆ ದಾಳಿ ಮಾಡುವುದು ದಕ್ಷಿಣ ಏಷ್ಯಾದ ಜಿಹಾದಿಗಳಿಗೆ ಪವಿತ್ರ ಸಂದೇಶ ಸಾರಿದಂತೆ ಎಂದು ಎ ಬ್ರೀಫ್ ಹಿಸ್ಟರಿ ಆಪ್ ದಿ ಇಸ್ಲಾಮಿಕ್ ಸ್ಟೇಟ್ ಕ್ಯಾಲಿಫಾಟೆ ಎನ್ನುವ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. 
 

ವೆಬ್ದುನಿಯಾವನ್ನು ಓದಿ