ಆರೆಸ್ಸೆಸ್ ನಾಯಕರ ಹತ್ಯೆಗೆ ಐಎಸ್‌ಐಎಸ್ ಸಂಚು

ಗುರುವಾರ, 16 ಏಪ್ರಿಲ್ 2015 (19:28 IST)
ತಮಿಳುನಾಡಿನ ಸುಮಾರು 50 ಆರ್ ಎಸ್ ಎಸ್ ನಾಯಕರನ್ನು ಶೂಟ್ ಮಾಡುವುದರ ಜೊತೆಗೆ ಮುಂದಿನ ವಾರ ತಮಿಳುನಾಡಿಲ್ಲಿ ಸರಣಿ ಬಾಂಬ್ ಸ್ಫೋಟಿಸುವುದಾಗಿ ಇಸಿಸ್ ಉಗ್ರರು ಬೆದರಿಕೆ ಹಾಕಿದ್ದಾರೆ.

ಚೆನ್ನೈ ನ ಡಿಜಿಪಿ ಕಚೇರಿಗೆ ಹಾಗೂ ಚೈನ್ನೈ ಪ್ರೆಸ್ ಕ್ಲಬ್ ಗೆ ಇಸಿಸ್ ಉಗ್ರರು ಬೆದರಿಕೆ ಪತ್ರ ಕಳುಹಿಸಿದ್ದು, ಕೆಂಪು ಇಂಕಿನಲ್ಲಿ ಬರೆಯಲಾಗಿದ್ದು, ಚೆನ್ನೈನಲ್ಲಿ 50 ಆರ್ ಎಸ್ ಎಸ್ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಆ ನಾಯಕರನ್ನು ಗುಂಡಿಟ್ಟು ಹತ್ಯೆ ಮಾಡಲಾಗುವುದು ಹಾಗೂ ಏಪ್ರಿಲ್ 24ರೊಳಗೆ ಮತ್ತೆ ಕೊಯಬಂತ್ತೂರ್ ನಲ್ಲಿ ಸರಣಿ ಬಾಂಬ್ ಸ್ಫೋಟಿಸಲಾಗುವುದು ಎಂದು ಬೆದರಿಕೆ ಹಾಕಲಾಗಿದೆ.

ನಿನ್ನೆ ಪೋಸ್ಟ್ ಮೂಲಕ ಬೆದರಿಕೆ ಪತ್ರ ಬಂದಿದ್ದು, ಪತ್ರದ ಮೇಲೆ ಯಾವುದೇ ಅಂಚೆ ಅಂಟಿಸಲಾಗಿಲ್ಲ. ಈ ಪತ್ರವನ್ನು ಸಿಪಿಸಿ ಜಂಟಿ ಕಾರ್ಯದರ್ಶಿ ಅವರಿಗೆ ಕಳುಹಿಸಿಕೊಡಲಾಗಿದೆ. ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1998 ಫೆಬ್ರವರಿ 14ರಂದು ಕೊಯಂಬತ್ತೂರಿನಲ್ಲಿ ಸರಣಿ ಬಾಂಬ್ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ 58 ಮಂದಿ ಸಾವನ್ನಪ್ಪಿ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ವೆಬ್ದುನಿಯಾವನ್ನು ಓದಿ