ಶ್ರೀನಗರದಲ್ಲಿ ಮತ್ತೆ 12 ಬಾರಿ ಐಸಿಸ್ ಧ್ವಜ ಹಾರಿಸಿದ ದೇಶದ್ರೋಹಿಗಳು

ಶನಿವಾರ, 1 ಆಗಸ್ಟ್ 2015 (15:38 IST)
ಕಣಿಯವೆಯಲ್ಲಿ ಇತ್ತೀಚೆಗೆ ಐಸಿಸ್ ಧ್ವಜಗಳನ್ನು ಹಾರಿಸುವಂತಹ ದೇಶದ್ರೋಹದ ಕೃತ್ಯಗಳಲ್ಲಿ ಹೆಚ್ಚಳವಾಗುತ್ತಿದೆ, ನಿನ್ನೆ ಕನಿಷ್ಠ 12 ಬಾರಿ ಐಸಿಸ್ ಧ್ವಜ ಹಾರಿಸಿ ಹೇಡಿತನವನ್ನು ದ್ರೋಹಿಗಳು ಮೆರೆದಿರುವುದು ಭದ್ರತಾ ಪಡೆಗಳ ಕಳವಳಕ್ಕೆ ಕಾರಣವಾಗಿದೆ. 
 
ಶ್ರೀನಗರದ ಜಾಮಾ ಮಸೀದಿ ಬಳಿ ನಿನ್ನೆ ಪ್ರಾರ್ಥನೆಯ ನಂತರ ಇಸ್ಲಾಮಿಕ್ ಸ್ಟೇಟ್ ಮತ್ತು ಪಾಕಿಸ್ತಾನ ಹಾಗೂ ಲಷ್ಕರ್- ಎ-ತೊಯಿಬಾ  ಧ್ವಜಗಳನ್ನು ಹಾರಿಸಲಾಗಿದೆ. ಕೆಲವೆಡೆ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗಳು ವರದಿಯಾಗಿವೆ.
 
ಮೂಲಗಳ ಪ್ರಕಾರ, ಐಸಿಸ್ ಧ್ವಜ ಹಾರಿಸಿದ್ದ ಕನಿಷ್ಠ 12 ಯುವಕರನ್ನು ಭದ್ರತಾ ಪಡೆಗಳು ಗುರುತಿಸಿವೆ. ಐಸಿಸ್ ಧ್ವಜ ಹಾರಿಸಿದ ಎಲ್ಲಾ ಘಟನೆಗಳ ಹಿಂದೆ ಇದೇ 12 ಯುವಕರ ಕೈವಾಡವಿರುವುದು ಸಿಸಿಟಿವಿ ಮತ್ತು ವಿಡಿಯೋಗಳಿಂದ ಪತ್ತೆಯಾಗಿದೆ. ಪೊಲೀಸರು ಆರೋಪಿಗಳ ಮೇಲೆ ನಿಗಾವಹಿಸಿದ್ದಾರೆ ಎನ್ನಲಾಗಿದೆ.  
 
ಪಾಕಿಸ್ತಾನದ ಸೈನಿಕರು ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗಗಳಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿದೆ ಎಂದು ಸೇನಾಪಡೆಗಳು ತಿಳಿಸಿವೆ.
 
ಪಂಜಾಬ್ ಗುರುದಾಸ್‌ಪುರ್‌ನ ದೀನಾನಗರದಲ್ಲಿ ದಾಳಿ ನಡೆಸಿದ್ದ ಉಗ್ರರು ಲಷ್ಕರ್ -ಎ-ತೊಯಿಬಾ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ