ದೇವಸ್ಥಾನದಲ್ಲಿ ಗೋಮಾಂಸ ಇಡಬೇಕೆಂದಿದ್ದ ಉಗ್ರರು

ಗುರುವಾರ, 30 ಜೂನ್ 2016 (12:36 IST)
ರಾಷ್ಟ್ರೀಯ ತನಿಖಾ ತಂಡ ಹೈದರಾಬಾದ್‌ನಲ್ಲಿ ಶಂಕಿತ ಐಸಿಸ್ ಉಗ್ರರು ಮತ್ತು ಬೆಂಬಲಿಗರನ್ನು ಬಂಧಿಸಿದ ಬಳಿಕ ಅವರು ಬಾಯ್ಬಿಟ್ಟ ಸತ್ಯ ಸಂಪೂರ್ಣ ದೇಶವನ್ನು ಬೆಚ್ಚಿ ಬೀಳಿಸಿದೆ. 

 
ಪ್ರಸಕ್ತ ನಡೆಯುತ್ತಿರುವ ಪವಿತ್ರಾ ಮಾಸ ರಮ್ಜಾನ್ ಸಂದರ್ಭದಲ್ಲಿ ಕೋಮುಗಲಭೆಯನ್ನು ಸೃಷ್ಟಿಸುವುದು ಅವರ ಯೋಜನೆಯಾಗಿತ್ತು ಎಂದು ತಿಳಿದು ಬಂದಿದೆ.
 
ಗೋವು ಮತ್ತು ಎಮ್ಮೆ ಮಾಂಸವನ್ನು ನಗರದ ಭಾಗ್ಯಲಕ್ಷ್ಮಿ ದೇವಸ್ಥಾನದಲ್ಲಿಟ್ಟು ಎರಡು ಸಮುದಾಯಗಳ ನಡುವೆ ಉರಿ ಹತ್ತಿಸುವ ಆಘಾತಕಾರಿ ಉದ್ದೇಶ ಅವರದಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
 
ಬಂಧಿತರಿಂದ ಎರಡು ಏರ್ ಗನ್, 9 ಎಂಎಂ ಪಿಸ್ತೂಲ್, ಉಗುರುಗಳು, ಎರಡು ಏರ್ ಗನ್ ಟಾರ್ಗೆಟ್ ಬೋರ್ಡ್,  ಸ್ಫೋಟಕಗಳು ಮತ್ತು ಸುಧಾರಿತ ಸ್ಫೋಟಕಗಳನ್ನು (ಇಐಡಿ ಗಳು) ತಯಾರಿಸಲು ಬಳಸುವ ರಾಸಾಯನಿಕಗಳು ಮತ್ತು ಇತರೇ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ 15 ಲಕ್ಷ ಮೊತ್ತದ ನಗದು, 23 ಮೊಬೈಲ್ ಫೋನ್, ಮೂರು ಲ್ಯಾಪ್‌ಟಾಪ್ ಮತ್ತು ಏಳು ಪೆನ್ ಡ್ರೈವ್‌ಗಳನ್ನು ಜಫ್ತಿ ಮಾಡಲಾಗಿದೆ.
 
ವರದಿಗಳ ಪ್ರಕಾರ ಎಸ್ಐಟಿ ಅಧಿಕಾರಿಗಳು ದೂರವಾಣಿ ಕರೆಯೊಂದನ್ನು ಟ್ರಾಫ್ ಮಾಡಿ ಶಂಕಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಅವರೆಲ್ಲ 20 ರಿಂದ 42 ವಯಸ್ಸಿನವರಾಗಿದ್ದಾರೆ.
 
ಮುಂದಿನ ಕೆಲ ದಿನಗಳಲ್ಲಿ ಬಹುದೊಡ್ಡ ವಿಧ್ವಂಸಕ ಕೃತ್ಯವನ್ನು ನಡೆಸುವುದು ಅವರ ಯೋಜನೆಯಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ