ಭವಿಷ್ಯದಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಬಾಹ್ಯಾಕಾಶ ಯಾತ್ರೆಗೆ ಈ ರಾಕೆಟ್ ಬಳಕೆಯಾಗಲಿದ್ದು, ಮೊದಲ ಮಾನವ ಸಹಿತ ಗಗನಯಾತ್ರೆ ಕೈಗೊಳ್ಳುವ ಭಾರತೀಯ ವ್ಯಕ್ತಿ ಮಹಿಳೆಯೇ ಆಗಿರಲಿದ್ದಾರೆ ಎಂದು ಇಸ್ರೋ ಹೇಳಿದೆ. ಸುಮಾರು 3-4ಶತಕೋಟಿ ಡಾಲರ್ ಗಳನ್ನು ಕೇಂದ್ರ ಸರ್ಕಾರ ಅನುಮೋದನೆ ನೀದಿದ ತಕ್ಷಣ 2-3 ಬಾಹ್ಯಾಕಾಶ ಯಾನಿಗಳಿರುವ ಮಾನವ ಸಹಿತ ಬಾಹ್ಯಾಕಾಶ ಯಾನ ಹಮ್ಮಿಕೊಳ್ಲಲು ಸಿದ್ಧ ಎಂದು ಇಸೋ ತಿಳಿಸಿದೆ.