67 ವರ್ಷದ ಜಯಲಲಿತಾ ಮದ್ರಾಸ್ ವಿಶ್ವವಿದ್ಯಾಲಯ ಆವರಣದಲ್ಲಿ ದೇವರ ಹೆಸರಿನಲ್ಲಿ ಅಮ್ಮ ಪ್ರಮಾಣವಚನ ಓದುತ್ತಿದ್ದಂತೆ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ನೆರೆದ ಗಣ್ಯರು ಕರತಾಡನದ ಮೂಲಕ ಸಂತಷ ವ್ಯಕ್ತಪಡಿಸಿದ್ದರು. ಅವರ ಜತೆ ಪನ್ನೀರ್ ಸೆಲ್ವಂ ಸೇರಿದಂತೆ 28 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಸೂಪರ್ ಸ್ಟಾರ್ ರಜನೀಕಾಂತ್, ಶರತ್ ಕುಮಾರ್, ಐಸಿಸಿ ಚೆರ್ಮನ್ ಎನ್. ಶ್ರೀನಿವಾಸನ್, ಸಂಗೀತ ಮಾಂತ್ರಿಕ ಇಳೆಯರಾಜಾ, ತಮಿಳು ಚಿತ್ರರಂಗದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.