ಜಮ್ಮು ಸರಕಾರ ರಚನೆ: ಪಿಡಿಪಿ ಮುಖ್ಯಸ್ಥೆ ಮೆಹಬೂಬಾರಿಂದ ಬಿಜೆಪಿಯೊಂದಿಗಿನ ಮೈತ್ರಿ ಅಂತ್ಯಕ್ಕೆ ಸಂಕೇತ

ಶುಕ್ರವಾರ, 5 ಫೆಬ್ರವರಿ 2016 (21:11 IST)
ಕಳೆದ ಕೆಲ ದಿನಗಳಿಂದ ನೆನೆಗುದಿಯಲ್ಲಿರುವ ಸರಕಾರ ರಚನೆ ಕುರಿತಂತೆ ಕೇಂದ್ರ ಸರಕಾರ ಆತ್ಮವಿಶ್ವಾಸ ಹೆಚ್ಚಿಸುವಂತಹ ನೀತಿಗಳನ್ನು ಘೋಷಿಸದಿದ್ದಲ್ಲಿ ಮೈತ್ರಿಯನ್ನು ಅಂತ್ಯಗೊಳಿಸುವುದಾಗಿ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಎಚ್ಚರಿಕೆ ನೀಡಿದ್ದಾರೆ.
 
ಜಮ್ಮುವಿನಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಮುಫ್ತಿ, ಹೊಸ ಸರಕಾರ ರಚನೆಗೆ ಮುನ್ನ ಹೊಸ ವಾತಾವರಣ ಸೃಷ್ಟಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ., ನಮ್ಮ ಉದ್ದೇಶವನ್ನು ಬ್ಲಾಕ್‌ಮೇಲ್ ಎಂದು ಪರಿಗಣಿಸಬಾರದು ಎಂದು ಕೋರಿದರು.
 
ಗಾಳಿಯಲ್ಲಿ ಸರಕಾರ ರಚನೆ ಮಾಡಲು ಸಾಧ್ಯವಾಗದು. ಒಂದು ವೇಳೆ, ಹೊಸ ಸರಕಾರ ರಚನೆಯಾದಲ್ಲಿ ಜನತೆಯ ಏಳಿಗೆಗಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅದಕ್ಕೆ ಕೇಂದ್ರ ಸರಕಾರದ ಸಹಕಾರ ಅಗತ್ಯವಾಗುತ್ತದೆ. ಆದರೆ, ಒಂದು ವೇಳೆ ಕೇಂದ್ರ ಸರಕಾರ ಸಹಕಾರ ನೀಡಿದಲ್ಲಿ ಉತ್ತಮವಾಗಿರುತ್ತದೆ. ನೀಡದಿದ್ದಲ್ಲಿ ಮತ್ತೆ ಹಿಂದಿನ ಕಾಲಕ್ಕೆ ಮರಳಬೇಕಾಗುತ್ತದೆ ಎಂದರು.   
 
ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಜನೆವರಿ 7ರಂದು ನಿಧನಗೊಂಡ ನಂತರ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆಯ ವಾತಾವರಣದಿಂದಾಗಿ ರಾಷ್ಟ್ರಪತಿ ಅಡಳಿತ ಹೇರಲಾಗಿದೆ. 

ವೆಬ್ದುನಿಯಾವನ್ನು ಓದಿ