ಶಾಲೆಗೆ ಮೊಬೈಲ್ ತರಬೇಡಿ ಎಂದ ಶಿಕ್ಷಕಿ: ಶಿಕ್ಷಕಿಯನ್ನು ಥಳಿಸಿದ ವಿದ್ಯಾರ್ಥಿನಿಯ ತಾಯಿ

ಶುಕ್ರವಾರ, 24 ಏಪ್ರಿಲ್ 2015 (15:17 IST)
ಶಾಲೆಗೆ ಬರುವಾಗ ಮೊಬೈಲ್ ತರುವುದು ಶಾಲಾಸಂಸ್ಥೆಯ ನಿಯಮದ ವಿರುದ್ಧವಾಗಿದೆ ಎಂದು ವಿದ್ಯಾರ್ಥಿನಿಗೆ ಬುದ್ದಿಹೇಳಿದ ಶಿಕ್ಷಕಿಯನ್ನು ವಿದ್ಯಾರ್ಥಿನಿಯ ತಾಯಿ ಥಳಿಸಿದ ಘಟನೆ ವರದಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿದ್ಯಾರ್ಥಿನಿಯ ಮೊಬೈಲ್ ಫೋನ್ ಸೇರಿದಂತೆ ಇತರ ಇಬ್ಬರು ವಿದ್ಯಾರ್ಥಿನಿಯರ ಮೊಬೈಲ್‌ ಫೋನ್‌ಗಳನ್ನು ಶಾಲಾಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದಾರೆ. ಇದು ಸಂಸ್ಥೆಯ ನಿಯಮದ ವಿರುದ್ಧವಾಗಿದೆ ಎಂದು ಶಾಲಾ ನಿರ್ದೆಶಕ ಮಂಡಳಿಯ ಸದಸ್ಯೆ ಜ್ಯೋತಿ ನಾಗ್ರಾಣಿ ತಿಳಿಸಿದ್ದಾರೆ.

ಶಾಲಾ ಅವಧಿ ಮುಗಿದ ನಂತರ ಶಾಲೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯ ಕೋಣೆಗೆ ನುಗ್ಗಿದ ವಿದ್ಯಾರ್ಥಿನಿಯ ತಾಯಿ ತರಣ್‌ಜಿತ್ ಕೌರ್, ಒಳಗಡೆಯಿಂದ ಬಾಗಿಲಿಗೆ ಬೀಗ ಜಡಿದು ಮನಬಂದಂತೆ ಥಳಿಸಿದ್ದಾಳೆ. ಕೌರ್ ಥಳಿಸಿರುವ ದೃಶ್ಯಗಳು ಸಿಸಿಟಿವಿಗಳಲ್ಲಿ ದಾಖಲಾಗಿವೆ.

ಘಟನೆಯ ಸಂಪೂರ್ಣ ವಿವರಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರಿಗೆ ನೀಡಲಾಗುವುದು. ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿಯ ತಾಯಿ ತರಣ್‌ಜಿತ್ ಕೌರ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ