ಸುಗ್ರಿವಾಜ್ಞೆ ನಂಬದ ತಮಿಳಗರು; ಶಾಶ್ವತ ಕಾನೂನಿಗೆ ಆಗ್ರಹ

ಭಾನುವಾರ, 22 ಜನವರಿ 2017 (12:09 IST)
ಜಲ್ಲಿಕಟ್ಟು ಮೇಲಿನ ನಿಷೇಧ ತೆರವಿಗೆ ಆಗ್ರಹಿಸಿ ಕಳೆದ ಆರು ದಿನಗಳಿಂದ ತಮಿಳುನಾಡಿನಾದ್ಯಂತ ನಡೆಯುತ್ತಿರುವ ಕ್ರಾಂತಿಕಾರಿ ಪ್ರತಿಭಟನೆ ಭಾನುವಾರವೂ ಮುಂದುವರೆದಿದೆ.
ಸುಗ್ರಿವಾಜ್ಞೆಯನ್ನು ನಂಬದ ತಮಿಳಗರು ಶಾಶ್ವತ ಕಾಯಿದೆಗೆ ಆಗ್ರಹಿಸಿದ್ದಾರೆ. ತಾತ್ಕಾಲಿಕ ಕ್ರಮದಿಂದ ಸಂತ್ರಪ್ತರಾಗದ ತಮಿಳಗರು ಮೂರು ವರ್ಷದ ನಿಷೇಧದ ಬಳಿಕ ಇದೇ ಪ್ರಥಮ ಬಾರಿಗೆ ಆಯೋಜನೆಯಾಗಿದ್ದ ಜಲ್ಲಿಕಟ್ಟು ಪ್ರದರ್ಶನವನ್ನು ತಡೆದಿದ್ದಾರೆ. ಮಧುರೈನಲ್ಲಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರಿಂದ ಮಧುರೈನ ಆಳಂಗನಲ್ಲೂರಿನಲ್ಲಿ ಉದ್ಘಾಟನೆಯಾಗಲಿದ್ದ ಜಲ್ಲಿಕಟ್ಟನ್ನು ರದ್ದುಗೊಳಿಸಲಾಗಿದ್ದು ಸಿಎಂಗೆ ಭಾರಿ ಮುಖಭಂಗವಾಗಿದೆ.
 
ಜನರ ಆಕ್ರೋಶದಿಂದ ಬೆವೆತಿರುವ ತಮಿಳುನಾಡು ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಸುಪ್ರೀಂಕೋರ್ಟ್‌ಗೆ ತಡೆ ಅರ್ಜಿಯನ್ನು ಸಲ್ಲಿಸಿದ್ದು, ರಾಜ್ಯದ ವಾದವನ್ನು ಆಲಿಸದೇ ಯಾವುದೇ ನಿರ್ಧಾರವನ್ನು ಕೈಗೊಳ್ಳಬೇಡಿ ಎಂದು ಮನವಿ ಸಲ್ಲಿಸಿದೆ. 
 
ಪ್ರತಿಭಟನೆಯ ನಡುವೆಯೂ ರಾಜ್ಯದ ಹಲವೆಡೆ ಜಲ್ಲಿಕಟ್ಟು ಆರಂಭವಾಗಿದೆ. ತಿರುಚ್ಚಿಯ ಮಣಪ್ಪಾರೈನ ಪುದುಪಟ್ಟಿಯಲ್ಲಿ ಜಲ್ಲಿಕಟ್ಟನ್ನು ಆಯೋಜಿಸಲಾಗಿದ್ದು, 140ಕ್ಕೂ ಹೆಚ್ಚು ಗೂಳಿಗಳು ಭಾಗವಹಿಸಿವೆ. ಯಾವುದೇ ಸಚಿವರು, ರಾಜಕಾರಣಿಗಳಿಗೆ ಇಲ್ಲಿ ಆಮಂತ್ರಣ ನೀಡಲಾಗಿಲ್ಲ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ